Saturday, July 2, 2022

Latest Posts

ಹುಬ್ಬಳ್ಳಿ: ಪ್ರತ್ಯೇಕ ಸ್ಥಳಗಳಲ್ಲಿ ಚಾಕು ಇರಿತ ಪ್ರಕರಣ ದಾಖಲು

ದಿಗಂತ ವರದಿ ಹುಬ್ಬಳ್ಳಿ:

ನಗರದಲ್ಲಿ ಸೋಮವಾರ ತಡರಾತ್ರಿ ಪ್ರತ್ಯೇಕ ಸ್ಥಳಗಳಲ್ಲಿ ಚಾಕು ಇರಿತ ಪ್ರಕರಣಗಳಾಗಿದ್ದು, ಈ ಘಟನೆಗಳಿಗೆ ಸಂಬಂಧಿಸಿದಂತೆ ಶಹರ ಹಾಗೂ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣಗಳು ದಾಖಲಾಗಿವೆ.

ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹರಿಶ್ಚಂದ್ರ ಕಾಲೊನಿಯ ನಿವಾಸಿ ರಾಜಶೇಖರ ಅಯ್ಯರ್ ಅವರಿಗೆ ಚಾಕು ಇರಿತವಾಗಿದ್ದು, ನಾಲ್ವರು ಸ್ನೇಹಿತರು ಸೋಮವಾರ ತಡರಾತ್ರಿ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದಾರೆ. ಮಾತಿಗೆ ಮಾತು ಬೆಳೆದು ರಾಜಶೇಖರಗೆ ಚಾಕು ಇರಿದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪವನ ಬಿಜವಾಡ, ಶುಭಮ್ ಬಿಜವಾಡ, ಮೋಹನ ಗಂಡಿನವರ ಮತ್ತು ರಾಬಿನ್ ಮರಿಯಾಳ ಆರೋಪಿತರಾಗಿದ್ದಾರೆ. ಈ ಕುರಿತು ಶರಹ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಬೇಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಕಸ್ತೂರಿಬಾ ನಗರದಲ್ಲಿ ನವೀನ ಎಂಬಾತನ ಮೇಲೆ ತನ್ವೀರ್ ಎಂಬಾತ ಚಾಕು ಇರಿದಿದ್ದಾನೆ. ಈ ಘಟನೆಗೆ ಹಣಕಾಸಿನ ವಿಷಯ ಕಾರಣ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss