ಹು-ಧಾ ಪಾಲಿಕೆ ಮೇಯರ್ ಸ್ಥಾನಕ್ಕೆ ಇಂದು ಚುನಾವಣೆ: ಈರೇಶ ಅಂಚಗೇರಿಗೆ ಆಯ್ಕೆ ಖಚಿತ

‌ಹೊಸದಿಗಂತ ವರದಿ, ಹುಬ್ಬಳ್ಳಿ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಯಾರಾಗಬೇಕು ಎಂಬ ಕೂತೂಹಲಕ್ಕೆ ಪಕ್ಷದ ಸ್ಥಳೀಯ ನಾಯಕರು ಶನಿವಾರ ಅಂತ್ಯ ಹಾಡಿದ್ದಾರೆ.
ಇಂದು ಮೇಯರ್ ಮತ್ತು ಉಪಮೇಯರ್ ಚುನಾವಣೆ ಚುನಾವಣೆ ನಡೆಯಲಿದ್ದು, ಮೇಯರ್ ಸ್ಥಾನವನ್ನು ಎಲ್ಲರೂ ಊಹಿಸಿದಂತೆ ಧಾರವಾಡದ ವಾರ್ಡ್ ನಂ ‌4 (3) ಈರೇಶ ಅಂಚಗೇರಿಗೆ ಮತ್ತು ಉಪಮೇಯರ್ ಸ್ಥಾನವನ್ನು ಹುಬ್ಬಳ್ಳಿ ವಾರ್ಡ್ ನಂ. 44ರ ಉಮಾ ಮುಕುಂದ ಅವರರನ್ನು ಮಾಡಲು ನಿರ್ಧರಿಸಲಾಗಿದೆ.
ಮಹಾನಗರದ ಪಾಲಿಕರ 82 ವಾಡ್೯ಗಳ ಪೈಕಿ ಬಿಜೆಪಿ ಅತೀ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿದ್ದರು‌. ಬಹುಮತ ಸಾಧಿಸಲು 42 ಸ್ಥಾನಗಳು ಬೇಕಾಗಿತ್ತು. ಶುಕ್ರವಾರ ತಡ ರಾತ್ರಿ ಪಕ್ಷೇತರರ ಇಬ್ಬರು ಅಭ್ಯರ್ಥಿಗಳು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಬಹುಮತ ಸಾಧಿಸಿದರು. ಇದರಿಂದ ಬಿಜೆಪಿ ಪಾಲಿಕೆ ಗದ್ದುಗೆ ಏರೆವುದು ಬಹುತೇಕ ಖಚಿತವಾಗಿತ್ತು.
ಅದರಂತೆ ಪಕ್ಷರ ಹಿರಿಯರು ಎಲ್ಲ ಅಭ್ಯರ್ಥಿಗಳ ಸಹಮತ ಪಡೆದು ಒಪ್ಪಿಗೆಯಂತೆ ಮೇಯರ್ ಆಗಿ ಈರೇಶ ಅಂಚಟಗೇರಿ ಮತ್ತು ಉಪಮೇಯರ ಆಗಿ ಉಮಾ ಮುಕುಂದ ಅವರಿಗೆ ನೀಡಲಾಗಿದೆ.
ಈರೇಶ ಅಂಚಟಗೇರಿ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಆಪ್ತರಾಗಿದ್ದರು. ಉಮಾ ಮುಕುಂದ ಅವರು ಅನುಭವಿ ಮತ್ತು ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ ಅವರು ಕ್ಷೇತ್ರ ಒಳಪಡುವ ವಾರ್ಡ್ ನವರು ಇರುದಾಗಿದ್ದರಿಂದ ಇವರಿಗೆ ನೀಡಲಾಗಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಸ್ಥಾನ ಧಾರವಾಡಕ್ಕೆ ದೊರೆತಿರುವುದು ಪ್ರತ್ಯೇಕ ಪಾಲಿಕೆ ಕೂಗಿದೆ ಸಿಕ್ಕ ಜಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!