ಹುಬ್ಬಳ್ಳಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ: ಬಾನಂಗಳದಲ್ಲಿ ಹಾರಾಡಿತು ಪಂಜುರ್ಲಿ, ಡಾಲಿನ್!

ಹೊಸದಿಗಂತ ವರದಿ, ಹುಬ್ಬಳ್ಳಿ:

ಕಾಂತಾರ ಸಿನಿಮಾದ ಪಂಜುರ್ಲಿ, ಡಾಲಿನ್, ರಾಷ್ಟ್ರ ಧ್ವಜ, ಐ ಲವ್ ಹುಬ್ಬಳ್ಳಿ ಎಂಬ ಬೃಹತ್ ಚಿತ್ತಾಕ್ಷರ ಹಾಗೂ ಹಾವುಗಳು ಆಕಾಶದಲ್ಲಿ ಹಾರಾಡಿರುವುದನ್ನು ನೀವೂ ನೋಡಲು ಸಾಧ್ಯವೇ ಇಲ್ಲ. ಶನಿವಾರ ಹುಬ್ಬಳ್ಳಿಯ ಬಾನಂಗಳದಲ್ಲಿ ಇವೇಲ್ಲವೂ ಸ್ವಚ್ಛದವಾಗಿ ಹಾರಾಡುತ್ತಾ ಹೊಸ ಚಿತ್ತಾರ ಮೂಡಿಸಿದವು.

ಇದು ನಗರದ ಕ್ಷಮತಾ ಸೇವಾ ಸಂಸ್ಥೆ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ನೇತೃತ್ವದಲ್ಲಿ ನಡೆದ ಹುಬ್ಬಳ್ಳಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಕಂಡು ಬಂದ ಸುಂದರ ದೃಶ್ಯಗಳಿವೂ.


ಕಳೆದೆರಡು ವರ್ಷ ಕೊರೋನಾದಿಂದ ನಡೆಯದ ಗಾಳಿಪಟ ಉತ್ಸವ ಈ ಬಾರಿ ಹೊಸ ಮನ್ವಂತರವನ್ನೇ ಸೃಷ್ಟಿಸಿತು. ದೇಶ ಅಷ್ಟೇ ಅಲ್ಲದೆ ೧೫ ವಿದೇಶಿಗಳ ೨೫ ರ್ಸ್ಪಗಳು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಮತ್ತೊಮ್ಮೆಅನಾವರಣಗೊಳಿಸಿದರು. ಸಾವಿರಾರೂ ಜನರು ಗಾಳಿಪಟ ಉತ್ಸವವನ್ನು ಕಣ್ತುಂಬಿಕೊಂಡರೇ ಶಾಲಾ ಮಕ್ಕಳು ನೋಡಿ ಸಂಭ್ರಮಿಸಿ ಕುಣಿದು ಕುಪ್ಪಳಿಸಿದರು. ಪಟದದಾರ ಹಿಡಿದು ತಾವು ಸಹ ಕೆಲ ಹೊತ್ತು ಹಾರಿಸಿ ಖುಷಿಪಟ್ಟರು. ಚಿಕ್ಕಮಕ್ಕಳಿನಿಂದ ಹಿಡಿದು ವಯೋವೃದ್ಧರು ಗಾಳಿಪಟ ಉತ್ಸವಕ್ಕೆ ಸಾಕ್ಷಿಯಾದರು. ಮಕ್ಕಳನ್ನು ಕರೆದುಕೊಂಡು ಬಂದಿದ್ದ ಪೋಷಕರು ಗಾಳಿಪಟಗಳ ಮುಂದೆನಿಂತು ಫೋಟೋಗಳಿಗೆ ಪೋಸ್ ನೀಡುತ್ತಿರುವುದು ಸಾಮಾನ್ಯವಾಗಿತ್ತು. ಉತ್ಸವದಲ್ಲಿ ಭಾಗವಹಿಸುವರನ್ನು ಆಕರ್ಷಿಸಲು ಏರ್ಪಡಿಸಿದ್ದ ಸೇಲಿ ತಾಣಗಳಿಗೆ ಬಿಡುವು ಇರಲಿಲ್ಲ. ಆಹಾರ ಮೇಳವೂ ನೋಡಲು ಬಂದ ಜನರಿಗೆ ಹಸಿವು ಹಾಗೂ ನೀರಿನ ದಾಹ ನಿಗಿಸಿದವು.

ಸುಡುಬಿಸಿಲಿದ್ದರು ಸಹ ಆಗಾಗ ಬಿಸುವ ಗಾಳಿಗೆ ಆಗಸದಲ್ಲಿ ಹಾರಾಡುತ್ತಿದ್ದ ಗಾಳಿಪಟ ನೋಡಿ ಜನರು ಮೈಮರೆಯುತ್ತಿದ್ದರು. ತಂತ್ರಜ್ಞಾನ ಯುಗದಲ್ಲಿಯೂ ಸಹ ಸಾಂಸ್ಕೃತಿಯ ಸಾರು ಕನ್ನಡ ಕಾಂತಾರ ಸಿನಿಮಾ ವಿಶ್ವ ಪ್ರಸಿದ್ಧಿ ಪಡೆದಿದೆ. ಇದರಿಂದ ಪ್ರಭಾವಿತನಾಗಿ ಕಾಂತಾರ ಗಾಳಿಪಟ ಪ್ರದರ್ಶಿಸಲು ಇಚ್ಛಿಸಿದೆ ಎಂದು ಬೆಳಗಾವಿಯ ಗಾಳಿಪಟ ರ್ಸ್ಪ ಕೀರ್ತಿ ಸುರಂಜನ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!