Wednesday, June 29, 2022

Latest Posts

ಹುಬ್ಬಳ್ಳಿ| ವೇತನ ಸಿಗದ ಹಿನ್ನೆಲೆ ಆರೋಗ್ಯ ವಾಣಿ ಕಚೇರಿಯಲ್ಲಿ ಪ್ರತಿಭಟನೆ

ಹೊಸ ದಿಗಂತ ವರದಿ, ಹುಬ್ಬಳ್ಳಿ:

ಕೋವಿಡ್ ಸಂದಿಗ್ಧ ಪರಿಸ್ಥಿಯಲ್ಲಿ ಪ್ರಾಣವನ್ನು ಲೆಕ್ಕಿಸದೆ ಜನಸಾಮಾನ್ಯ ಸೇವೆ ಮಾಡಿದ್ದೇವೆ ಆದರೆ ಕಳದೆರಡು ತಿಂಗಳಿನಿಂದ ವೇತನ ನೀಡಿಲ್ಲಾ ಎಂದು ನಗರದ ಐಟಿ ಪಾಕ್೯ ನಲ್ಲಿರುವ ಆರೋಗ್ಯ ವಾಣಿ ಕಚೇರಿಯಲ್ಲಿ ಪ್ರತಿಭಟನೆ ಮಾಡಿದರು.
ಸುಮಾರು 240ಕ್ಕೂ ಹೆಚ್ಚು 104 ಮತ್ತು 108 ಆರೋಗ್ಯ ಸಿಬ್ಬಂದಿಗಳಿಗೆ ವೇತನ ಬಂದಿಲ್ಲ. ಇದರಿಂದ ಕುಟುಂಬ ನಿರ್ವಹಣೆಗೆ ತೊಂದರೆಯಾಗಿದೆ.
ಕೋವಿಡ್ ಸಮಯದಲ್ಲಿ ನಿಷ್ಠಾವಂತರಾಗಿ ನಮ್ಮ‌ಎಲ್ಲ ಸಿಬ್ಬಂದಿಗಳು ಕೆಲಸ ಮಾಡಿದ್ದು, ಹಗಲು ರಾತ್ರಿಯನ್ನದೆ ಕಾರ್ಯ ನಿರ್ವಹಿಸಿದ್ದೇವೆ ಆದರೆ ಪ್ರತಿ ಸಾರಿಯು ಆರೋಗ್ಯ ಇಲಾಖೆ ವೇತನ ನೀಡದೆ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ ಇದರಿಂದ ಸಂಸಾರ ನಡೆಸುವುದ ಕಷ್ಟವಾಗುತ್ತಿದೆ. ತಕ್ಷಣ ನಮ್ಮ ಸಮಸ್ಯೆಗೆ ಸ್ಪಂದಿಸಿ ಸರ್ಕಾರ ಮತ್ತು ಆರೋಗ್ಯ ಇಲಾಖೆ ವೇತ ಬೀಡುಗಡೆ ಮಾಡಬೇಕು ಇಲ್ಲವಾದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಮಲ್ಲಿಕಾರ್ಜುನ ಎಂ., ಪ್ರತಿಭಟನೆ ವೇಳೆ ಮಾಧ್ಯಮದವರಿಗೆ ತಿಳಿಸಿದರು.
ಜನಸಾಮಾನ್ಯರಿಗೆ 24 ತಾಸು ನಿರಂತರ ಸಂಪರ್ಕದಲ್ಲಿದ್ದು ಮಾಹಿತಿ ನೀಡುತ್ತಿದ್ದು, ಸರ್ಕಾರ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದು ಸರಿಯಲ್ಲ ಅದಕ್ಕೆ ತಕ್ಷಣ ಎಲ್ಲ ಸಿಬ್ಬಂದಿಗಳಿಗೆ ವೇತನ ಬಿಡುಗಡೆ ಮಾಡಬೇಕು ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss