Monday, September 26, 2022

Latest Posts

ಹುಬ್ಬಳ್ಳಿ: ರೈತ ಸಂಘಟನೆಗಳಿಂದ ಸೆ. 12 ರಂದು ಬೆಂಗಳೂರು ಚಲೋ

ಹೊಸದಿಗಂತ ವರದಿ, ಹುಬ್ಬಳ್ಳಿ:
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೆ. 12 ರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನಾದಿಂದ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸೇನೆಯ ಧಾರವಾಡ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಕೂನ್ನೂರ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ವಿವಿಧ ಜಿಲ್ಲೆಯ ನೂರಾರೂ ರೈತರು ಈ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದಾರೆ. ಅಂದು ಬೆಳಿಗ್ಗೆ ಸಂಗೊಳಿ ರಾಯಣ್ಣ ರೈಲು ನಿಲ್ದಾಣದಿಂದ ವಿಧಾನ ಸೌಧವರೆಗೆ ದೀಡ್ ಸಮಸ್ಕಾರ ಹಾಕುವ ಮೂಲಕ ಮೆರವಣಿಗೆ ನಡೆಸಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಗುತ್ತದೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆ ತಕ್ಷಣ ಹಿಂಪಡೆಯಬೇಕು. ವಿದ್ಯತ್ ಇಲಾಖೆ ಖಾಸಗೀಕರಣ ಕೈಬಿಡಬೇಕು, ರೈತರ ಪಂಪ ಸೆಟ್ ಗಳಿಗೆ ಮೀಟರ್ ಅಳವಡಿಸುವ ಕಾರ್ಯ ನಿಲ್ಲಿಸಬೇಕು ಒತ್ತಾಯಿಸಿದರು.ರೈತರ ಬೇಡಿಕೆ ಹಾಗೂ ಅತಿವೃಷ್ಟಿ ಉಂಟಾಗಿ ಈ ಭಾಗದ ಸಾಕಷ್ಟು ಬೆಳೆ ನಾಶವಾಗಿದೆ. ಸರ್ಕಾರ ಇದು ವರೆಗೂ ಪರಿಹಾರ ಒದಗಿಸಿಲ್ಲ. ರೈತರ ಹೋರಾಟ ಮಾಡಿ ಪರಿಹಾರ ಪಡೆಯುವ ಪರಿಸ್ಥಿತಿ ಸರ್ಕಾರ ತಂದಿದೆ. ಪ್ರತಿ ವರ್ಷ ಪ್ರವಾಹದಿಂದ ಬೆಣ್ಣೆ ಹಳ್ಳ ಪಕ್ಕದ ಗ್ರಾಮಗಳು ಪ್ರವಾಹದಿಂದ ನಲಗುತ್ತಿವೆ. ಶಾಶ್ವತ ಪರಿಹಾರ ಸರ್ಕಾರ ತರಬೇಕು ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಧಾರವಾಡ ಜಿಲ್ಲಾ ಉಪಾಧ್ಯಕ್ಷ ಶಂಕರ ಆಚಾರ, ಸದಸ್ಯರಾದ ವಿಜಯಕುಮಾರ ಹಿರೇಮಠ, ಶಿವನಂದ ಗೌಡಪ್ಪನವರ, ವೇಂಕಣ್ಣ ಕಂಟೆಪ್ಪಗೌಡರ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!