Thursday, June 30, 2022

Latest Posts

ಹುಬ್ಬಳ್ಳಿ: ಜೂನ್ 4ರಂದು ಸಕ್ಕರೆ ಕಾಯಿಲೆ ಉಚಿತ ತಪಾಸಣಾ ಶಿಬಿರ

ಹೊಸದಿಗಂತ ವರದಿ, ಹುಬ್ಬಳ್ಳಿ
ನಗರದ ನ್ಯೂ ಕಾಟನ್ ಮಾರ್ಕೆಟ್ ನಲ್ಲಿರುವ ಸೌ. ಮಂದಾಕಿನಿ ಮೆಮೋರಿಯಲ್ ಕ್ಲಿನಕ್ ವತಿಯಿಂದ ಸಕ್ಕರೆ ಕಾಯಿಲೆ ಉಚಿತ ತಪಾಸಣಾ ಶಿಬಿರ ಜೂನ್ 4 ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಡಾ.‌ಸುನೀಲ ವಾಸುದೇವ ಕರಿ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಸಕ್ಕರೆ ಕಾಯಿಲೆ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಆದರೆ ಯಾರು ಇದನ್ನು ತಡೆಗಟ್ಟಲು ಕ್ರಮ ಮತ್ತು ಜಾಗೃತಿ ಮಾಡುತ್ತಿಲ್ಲ. ಪ್ರಸ್ತುತವಾಗಿ ಸಕ್ಕರೆ ಕಾಯಿಲೆ‌ ಬಗ್ಗೆ ಜಾಗೃತಿ ಅವಶ್ಯಕತೆ ಇದೆ ಎಂದರು.
ಜಿಲ್ಲೆಯಲ್ಲಿ 20 ಲಕ್ಷ ಜನರು ಸಕ್ಕರೆ ಕಾಲೆಯಿಂದ ಬಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಆತಂಕ ಎದುರಾಗಿದೆ. ಆದರಿಂದ ಸಕ್ಕರೆ ಕಾಯಿಲೆ ತಡೆಗಟ್ಟಲು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಸಕ್ಕರೆ ಕಾಯಿಲೆ‌ ಇರುವವರಿಗೆ ಕಾಲಿನಲ್ಲಿ ನರ ದೋಷವಾದಾಗ ಅದು ಹೆಚ್ಚಾಗುತ್ತದೆ. ಆದರಿಂದ ಜನರು ಮುಂಜಾಗೃತವಾಗಿ ಚಿಕಿತ್ಸೆ ಪಡೆಯಬೇಕು. ಕಾಲಿಗೆ ಗಾಯವಾಗದಂತೆ ರಕ್ಷಿಸಬೇಕು. ಪ್ರತಿನಿತ್ಯ ವ್ಯಾಯಾಮ ನರದೋಷವಾಗದಂತೆ ನೋಡಿಕೊಳ್ಳಬೇಕು‌. ಉತ್ತಮ‌ ಆಹಾರ ಸೇವನೆ ಅಗತ್ಯವಾಗಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss