Monday, August 15, 2022

Latest Posts

Hug ಮಾಡುವ ಅಭ್ಯಾಸ ನಿಮಗಿಲ್ಲವಾ? Hug ಮಾಡುವುದರಿಂದ ಆಗುವ ಲಾಭಗಳಿವು..

ನಿಮ್ಮ ಸ್ನೇಹಿತರು ಅಥವಾ ಪ್ರೀತಿ ಪಾತ್ರರನ್ನು ಮೀಟ್ ಮಾಡಿದ ತಕ್ಷಣ ಹೇಗೆ ರಿಯಾಕ್ಟ್ ಮಾಡುತ್ತೀರಿ? ಹಾಯ್ ಅನ್ನುತ್ತೀರಾ? ಅಥವಾ ಹ್ಯಾಂಡ್ಸ್ ಶೇಕ್? ಇದಿಷ್ಟೆ ಅಭ್ಯಾಸ ಇದ್ದವರು ಹಗ್ ಮಾಡುವುದನ್ನು ಕಲಿತುಕೊಳ್ಳಿ. ಪ್ರೀತಿಯಿಂದ ಒಂದು ಹಗ್ ಮಾಡಿ ದಿನ ಆರಂಭಿಸಿದರೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ? ಕೆಲವರು ಹಗ್ ಮಾಡುವುದು ಇಷ್ಟಪಡುವುದಿಲ್ಲ. ಅದರಲ್ಲೂ ಹುಡುಗ ಹುಡುಗಿ ಹಗ್ ಮಾಡುವುದು ಕೆಲವರಿಗೆ ಸರಿ ಕಾಣುವುದಿಲ್ಲ. ಆದರೆ ಎಲ್ಲ ಬಾರಿಯೂ ಹೀಗೆ ಯೋಚಿಸಲಾಗುವುದಿಲ್ಲ. ಇಬ್ಬರು ಮನುಷ್ಯರು ಸ್ನೇಹ ಬಾಂಧವ್ಯ ಅಷ್ಟೇ. ಹಗ್ ಮಾಡುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?
ಸ್ಟ್ರೆಸ್ ರಿಲೀಸ್: ಕೆಲವರು ಮನೆಗೆ ಬಂದ ತಕ್ಷಣ ಮಕ್ಕಳನ್ನು ಏಕೆ ಹಗ್ ಮಾಡುತ್ತಾರೆ ಗೊತ್ತಾ? ಇದರಿಂದ ಅವರ ಕೆಲಸದ ಸ್ಟ್ರೆಸ್ ರಿಲೀಸ್ ಆಗುತ್ತದೆ. ಸ್ಟ್ರೆಸ್ ಆಗದಂತಿರಲು ಹಗ್ ಮಾಡುವ ಅಭ್ಯಾಸ ಮಾಡಿಕೊಳ್ಳಿ.
ಇಮ್ಯುನಿಟಿ ಹೆಚ್ಚುತ್ತದೆ: ಸಂಶೋಧನೆಯೊಂದರ ಪ್ರಕಾರ ಹಗ್ ಮಾಡುವುದರಿಂದ ನಮ್ಮ ಇಮ್ಯುನಿಟಿ ಹೆಚ್ಚುತ್ತದೆ. ನೀವೇ ಗಮನಿಸಿ, ನಿಮಗೆ ಅರಾಮಿಲ್ಲದಾಗ ನೀವು ನಿಮ್ಮ ತಾಯಿ ಅಥವಾ ತಂದೆಯಿಂದ ದೂರ ಇದ್ದರೆ ಅವರು ನಿಮ್ಮ ಜೊತೆಗಿರಲಿ ಎನಿಸುತ್ತದೆ. ಅವರನ್ನೊಮ್ಮೆ ಹಗ್ ಮಾಡಿದರೆ ಎಷ್ಟೋ ರಿಲೀಫ್ ಅನಿಸುತ್ತದೆ.
ಸೆಕ್ಯೂರ್ ಭಾವನೆ: ಮಾಮೂಲಿ ಕ್ಯಾಶುಯಲ್ ಹಗ್ ಮಾಡುವಾಗ ಯಾರಿಗೂ ಯಾವ ಭಾವನೆಯೂ ಬರುವುದಿಲ್ಲ. ಆದರೆ ನೀವು ದುಃಖದಲ್ಲಿದ್ದಾಗ ಅಥವಾ ಕಷ್ಟ ಅನುಭವಿಸುತ್ತಿದ್ದಾಗ ನಿಮ್ಮ ಪ್ರೀತಿ ಪಾತ್ರರನ್ನು ಹಗ್ ಮಾಡಿದರೆ ಅದು ನಿಮಗೆ ಸೆಕ್ಯೂರ್ ಫೀಲಿಂಗ್ ನೀಡುತ್ತದೆ. ನಿಮ್ಮನ್ನು ಕಾಪಾಡಲು ಯಾರೋ ಇದ್ದಾರೆ ಎಂಬ ಭಾವನೆ ಬೆಳೆಯುತ್ತದೆ.
ಆಕ್ಸಿಟೋಸಿನ್ ರಿಲೀಸ್: ಆಕ್ಸಿಟೋಸಿನ್‌ನ್ನು ಕಾಮನ್ ಆಗಿ ಲವ್ ಹಾರ್ಮೋನ್ ಎನ್ನುತ್ತಾರೆ.ಬಾಂಡ್ ಬೆಳೆಯುತ್ತದೆ. ಲವ್ ಹಾರ್ಮೋನ್ ಉತ್ಪತ್ತಿಯಿಂದ ದೇಹದಲ್ಲಿ ಬದಲಾವಣೆ ಆಗುತ್ತದೆ. ಬೇಸರದಲ್ಲಿದ್ದಾಗ ನಿಮ್ಮ ಪ್ರೀತಿಪಾತ್ರರನನ್ನು ಹಗ್ ಮಾಡಿ ನಿಮಗೆ ಭಾವನೆ ಬದಲಾಗುವುದನ್ನು ನೋಡಿ. ನಿಮ್ಮ ಅವರ ಬಾಂಡ್ ಕೂಡ ಚೆನ್ನಾಗಿರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss