ಹೈಬ್ರೀಡ್ ತಳಿ ಬಾಳೆಗೆ ಭಾರಿ ಬೇಡಿಕೆ !

-ಮಲ್ಲಿಕಾರ್ಜುನ ತುಂಗಳ

ರಬಕವಿ-ಬನಹಟ್ಟಿ: ರಾಜ್ಯವಷ್ಟೇ ಅಲ್ಲದೆ ಈ ಬಾರಿ ದೇಶಾದ್ಯಂತ ಬಾಳೆ ಬೆಳೆಯ ಇಳುವರಿ ಕ್ಷೀಣಿಸಿದ್ದರ ಹಿನ್ನೆಲೆಯಲ್ಲಿ ಜವಾರಿಯಷ್ಟೇ ಮಹತ್ವವಾಗಿ ಹೈಬ್ರೀಡ್ ತಳಿಯ ಬಾಳೆಗೂ ಭಾರಿ ಬೇಡಿಕೆ ಬಂದಿದ್ದು, ಐತಿಹಾಸಿಕ ದಾಖಲೆ ಬರೆಯುವಲ್ಲಿ ಕಾರಣವಾಗಿದೆ.
ಕಳೆದ ವರ್ಷ ಲಾಕ್ಡೌನ್ನಲ್ಲಿ ಪ್ರತಿ ಕೆಜಿ ಬಾಳೆಗೆ 2 ರಿಂದ 3 ರೂ. ಇದ್ದದ್ದು, ಇದೀಗ 22 ರಿಂದ 23 ರೂ.ಗಳವರೆಗೆ ಏರಿಕೆ ಕಂಡಿದ್ದು, ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಇಷ್ಟೊಂದು ಬೆಲೆ ಏರಿಕೆ ಕಂಡಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಜವಾರಿ, ರಸಬಾಳೆ, ಏಲಕ್ಕಿ ಬಾಳೆ ಹಣ್ಣಿನಷ್ಟೇ ಹೈಬ್ರೀಡ್ ತಳಿಯ ಜಿ-9 ಬಾಳೆಯೂ ಸಮನಾದ ಬೆಲೆಗೆ ಮಾರುಕಟ್ಟೆಯಲ್ಲಿ ದುಬಾರಿಯಾಗಿದ್ದು, ಜನರು ಹೆಚ್ಚು ಕಡಿಮೆ ಸೇಬು, ಮಾವಿನ ಹಣ್ಣಿಗೆ ನೀಡುವಷ್ಟು ಹಣ ಕೊಟ್ಟು ಬಾಳೆ ಹಣ್ಣು ಖರೀದಿಸುವುದು ಅನಿವಾರ್ಯವಾಗಿದೆ.

ರಾಜ್ಯದಲ್ಲಿ ಬೆಳೆಯವ ಬಾಳೆ ಬೆಳೆ ಉತ್ಪನ್ನದಲ್ಲಿ ಕೊರತೆ ಕಾಣಿಸಿಕೊಂಡಿದೆ. ಹೀಗಾಗಿ ಈಗ ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಿಂದ ಬಾಳೆ ಆಮದು ಮಾಡಿಕೊಳ್ಳಲಾಗುತ್ತಿದ್ದರೂ ಬೇಡಿಕೆಯಷ್ಟು ಪೂರೈಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಹಜವಾಗಿ ಬಾಳೆಹಣ್ಣಿನ ಬೆಲೆ ಗಗನಕ್ಕೇರಿದೆ. ಕೆಲವೆಡೆ ಬಾಳೆಹಣ್ಣು ಮಾರಾಟಕ್ಕೆ ಸಿಗುತ್ತಿಲ್ಲ. ರಾಜ್ಯದ ಸಗಟು ಮಾರುಕಟ್ಟೆಯಲ್ಲಿ ಜಿ-9 ಬಾಳೆಯು ಕ್ವಿಂಟಲ್ಗೆ 2200 ರಿಂದ 2500 ರೂ.ವರೆಗೆ ಮಾರಾಟವಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!