ಬಾಲಕನಿಗೆ ತನ್ನ ನಾಲಿಗೆ ನೆಕ್ಕುವಂತೆ ಹೇಳಿದ ದಲೈಲಾಮಾ ವಿರುದ್ಧ ಭಾರೀ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿಬೆಟಿಯನ್ ಧರ್ಮಗುರು ವಿಡಿಯೋವೊಂದು ಹೊರಬೀಳುತ್ತಿದ್ದಂತೆ ಅವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಕಾರ್ಯಕ್ರಮವೊಂದರಲ್ಲಿ ಬಾಲಕನನ್ನು ವೇದಿಕೆಗೆ ಕರೆದು ಮುತ್ತಿಟ್ಟು ನಂತರ ನನ್ನ ನಾಲಿಗೆ ಚೀಪುತ್ತೀಯಾ ಎಂದು ದಲೈಲಾಮಾ ಕೇಳಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಈ ರೀತಿ ಕೇಳಿದ್ಯಾಕೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

ಬೌದ್ಧರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮಗುವೊಂದು ದಲೈಲಾಮಾ ಅವರನ್ನು ಅಪ್ಪಿಕೊಳ್ಳಬಹುದಾ ಎಂದು ಕೇಳಿದ್ದ. ಆತನನ್ನು ವೇದಿಕೆಗೆ ಕರೆದಿದ್ದು, ತುಟಿಗೆ ಮುತ್ತುಕೊಟ್ಟಿದ್ದಾರೆ. ನಂತರ ನಾಲಿಗೆ ಹೊರತೆಗೆದು ನನ್ನ ನಾಲಿಗೆ ನೆಕ್ಕು ಎಂದು ಹೇಳಿದ್ದಾರೆ. ಆದರೆ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ದಲೈ ಲಾಮಾ ಅವರು ಬಾಲಕನೊಂದಿಗೆ ತಮಾಷೆ ಮಾಡುತ್ತಿದ್ದರು, ಅರ್ಧಂಬರ್ಧ ವಿಡಿಯೋ ವೈರಲ್ ಮಾಡಲಾಗಿದೆ ಎಂದು ಅನುಯಾಯಿಯೊಬ್ಬರು ಮಾಹಿತಿ ನೀಡಿದ್ದಾರೆ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!