Friday, August 19, 2022

Latest Posts

ಪಾಕಿಸ್ಥಾನಕ್ಕೆ ಭಾರೀ ಹಿನ್ನಡೆ: ಕೊನೇ ಕ್ಷಣದಲ್ಲಿ ಪಂದ್ಯ ರದ್ದುಪಡಿಸಿದ ನ್ಯೂಜಿಲೆಂಡ್!

ಹೊಸದಿಗಂತ ಆನ್ ಲೈನ್ ಡೆಸ್ಕ್:

ದಶಕಗಳ ಬಳಿಕ ತನ್ನ ನೆಲದಲ್ಲಿ ಅಂತಾರಾಷ್ಟ್ರೀಯ ಪಂದ್ಯ ಏರ್ಪಡಿಸುವ ಪಾಕಿಸ್ಥಾನದ ಪ್ರಯತ್ನಕ್ಕೆ ದೊಡ್ಡ ಹಿನ್ನಡೆಯಾಗಿದೆ. ನ್ಯೂಜಿಲೆಂಡ್ ತಂಡವು ಇಲ್ಲಿ ನಡೆಯಬೇಕಿದ್ದ ಏಕದಿನ ಪಂದ್ಯದಿಂದ ಕೆಲವೇ ಕ್ಷಣಗಳ ಮೊದಲು ಹಿಂದೆ ಸರಿದಿದೆ.
ಏಕದಿನ ಪಂದ್ಯವು ಆರಂಭಗೊಳ್ಳಲು ಕೆಲವೇ ನಿಮಿಷಗಳ ಮೊದಲು ನ್ಯೂಜಿಲೆಂಡ್ ತಾನು ಕ್ರಿಕೆಟ್ ಸರಣಿಯನ್ನು ರದ್ದುಪಡಿಸಿರುವುದಾಗಿ ಪ್ರಕಟಿಸಿತು. ಭದ್ರತಾ ಕಾರಣಗಳನ್ನು ನೀಡಿ ನ್ಯೂಜಿಲೆಂಡ್ ಈ ನಿರ್ಧಾರ ತಳೆದಿದೆ.
ನ್ಯೂಜಿಲೆಂಡ್ ಪಾಕಿಸ್ಥಾನಕ್ಕೆ ಆಡಲು ಬಂದದ್ದೂ 18 ವರ್ಷಗಳ ಬಳಿಕವಾಗಿತ್ತು. 3 ಏಕದಿನ ಪಂದ್ಯ ಹಾಗೂ 5 ಟಿ-20 ಪಂದ್ಯವಾಡುವುದು ಯೋಜನೆಯಾಗಿತ್ತು. ನ್ಯೂಜಿಲೆಂಡ್ ಆಟಗಾರರಿಗೆ ಬೆದರಿಕೆಯ ಸಾಧ್ಯತೆಗಳು ಹೆಚ್ಚಿರುವುದರಿಂದ ಪಂದ್ಯವನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ. ಸರಣಿಯನ್ನು ಮುಂದುವರಿಸದಿರಲು ನಿರ್ಧರಿಸಿದ್ದೇವೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!