ಎಲಾನ್‌ ಮಸ್ಕ್‌ಗೆ ಮತ್ತೊಂದು ಬಿಗ್‌ ಶಾಕ್: ಟೆಸ್ಲಾ ಷೇರುಗಳಲ್ಲಿ ಕುಸಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಗತ್ತಿನಾದ್ಯಂತ ಇದೀಗ ಭಾರೀ ಸುದ್ದಿಯಲ್ಲಿರುವ ಹೆಸರು ಎಲಾನ್‌ ಮಸ್ಕ್‌ ಅವರದ್ದು. $ 44 ಬಿಲಿಯನ್‌ ಕೊಟ್ಟು ಟ್ವಿಟರ್ ಅನ್ನು ಖರೀದಿ ಮಾಡಿದ್ದಾರೆ. ಟ್ವಿಟರ್ ಮಸ್ಕ್ ಕೈಗೆ ಹೋಗುತ್ತಿದ್ದಂತೆ ಪ್ರಮುಖ ಬದಲಾವಣೆಗಳು ನಡೆದಿವೆ. ಪ್ರಸ್ತು ಟೆಸ್ಲಾ ಸಿಇಒ ಆಗಿರುವ ಮಸ್ಕ್‌ಗೆ ಕಂಪನಿಯ ಷೇರುಗಳು ಕುಸಿದಿರುವುದು ಭಾರೀ ಹೊಡೆತಕ್ಕೆ ಕಾರಣವಾಗಿದೆ.

ಎಲಾನ್‌ ಮಸ್ಕ್‌ ಟ್ವಿಟ್ಟರ್‌ ಸಂಸ್ಥೆಗೆ ಇನ್ನೂ 21ಬಿಲಿಯನ್‌ ಡಾಲರ್‌ ಪಾವತಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ಟೆಸ್ಲಾಂ ಸಂಸ್ಥೆಯ ತನ್ನ ಷೇರುಗಳನ್ನು ಮಾರುವುದಾಗಿ ತಿಳಿಸಿದ್ದಾರೆ. ಮಸ್ಕ್‌ ನಿರ್ಧಾರಕ್ಕೆ ಹೂಡಿಕೆದಾರರು ಆತಂಕಕ್ಕೆ ಗುರಿಯಾಗಿದ್ದು, ಇದೀಗ ಟೆಸ್ಲಾಂ ಕಂಪನಿ 126ಬಿಲಿಯನ್‌ ನಷ್ಟವನ್ನು ಅನುಭವಿಸಿದೆ.

ಟೆಸ್ಲಾ ಷೇರುಗಳು ಇದ್ದಕ್ಕಿದ್ದಂತೆ ಕುಸಿದಿರುವುದಕ್ಕೆ ಅನೇಕ ಕಾರಣಗಳು ದೊರೆಯುತ್ತಿವೆ. ಜಾಗತಿಕ ಆರ್ಥಿಕತೆಯಲ್ಲಿನ ಮಂದಗತಿ ಹಾಗೂ ಯುಎಸ್ ಫೆಡರಲ್ ರಿಸರ್ವ್‌ ಬ್ಯಾಂಕ್‌ ಬಡ್ಡಿ ದರಗಳ ಹೆಚ್ಚಳ ಎಂದು ಮಾರುಕಟ್ಟೆ ವಿಶ್ಲೇಷಕರು ಬಣ್ಣಿಸಿದ್ದಾರೆ. ಮತ್ತೊಂದೆಡೆ, ಮಸ್ಕ್ ಟ್ವಿಟರ್ ಕೊಳ್ಳುವ ಸಲುವಾಗಿ ಟೆಸ್ಲಾದಿಂದ $ 12.5 ಬಿಲಿಯನ್ ಮಾರ್ಜಿನ್ ಸಾಲವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇದೀಗ ಟೆಸ್ಲಾ ಷೇರುಗಳು ಮಾರಾಟಕ್ಕೆ ಬರುತ್ತಿರುವುದು ಹೂಡಿಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಟೆಸ್ಲಾ ಷೇರಿನ ಬೆಲೆ ಕುಸಿತ ಮುಂದುವರಿದರೆ ಮಸ್ಕ್ ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!