ರಸ್ತೆಗೆ ಉರುಳಿಬಿದ್ದ ಬೃಹತ್ ಮರ: ಕುಮಟಾ-ಸಿದ್ದಾಪುರ ಮಾರ್ಗ ಸಂಪರ್ಕ ಕಡಿತ, ಪ್ರಯಾಣಿಕರ ಪರದಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿದ್ದಾಪುರ-ಕುಮಟಾ ಮಾರ್ಗದ ದೊಡ್ಮನೆ ಘಟ್ಟದಲ್ಲಿ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಮರವೊಂದು ರಸ್ತೆಗೆ ಉರುಳಿಬಿದ್ದ ಪರಿಣಾಮ ಸಂಪರ್ಕ ಕಡಿತಗೊಂಡ ಘಟನೆ ನಡೆದಿದೆ.

ಗಾಳಿ, ಮಳೆ ಜೋರಾದ ಬೆನ್ಮಲ್ಲೇ ದೊಡ್ಮನೆ ಘಟ್ಟ ಪ್ರದೇಶದ ಬಳಿ ರಾಜ್ಯ ಹೆದ್ದಾರಿಗೆ ಬೃಹದಾಕಾರದ ಮರ ಉರುಳಿ ಬಿದ್ದಿದೆ. ಇದರಿಂದ ಎರಡು ಬದಿ ಸಂಪರ್ಕ ಕಡಿತಗೊಂಡಿದ್ದು, ಸಾರಿಗೆ ಬಸ್ ಸೇರಿದಂತೆ ಹಲವು ವಾಹನಗಳು ಘಟ್ಟ ಪ್ರದೇಶದಲ್ಲಿಯೇ ಸಾಲುಗಟ್ಟಿ ನಿಂತಿದೆ.

ಸಿದ್ದಾಪುರ ಮಾರ್ಗದಿಂದ ಆಗಮಿಸಿದ ವಾಹನಗಳು ಉಡಳ್ಳಿ, ದೊಡ್ಮನೆ ಬಳಿ ಹಾಗೂ ಕುಮಟಾ ಮಾರ್ಗದಿಂದ ಆಗಮಿಸಿದ ವಾಹನಗಳು ಮಾಸ್ತಿಮನೆ, ಬಡಾಳ ಬಳಿ ನಿಲ್ಲಿಸಲಾಗಿದೆ. ಮರವನ್ನು ತೆರವು ಕಾರ್ಯ ಮಾಡಲಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!