ಮಾನವ ಕಳ್ಳಸಾಗಣೆ ಪ್ರಕರಣ: ಗಾಯಕ ದಲೇರ್‌ ಮೆಹಂದಿಗೆ ಎರಡು ವರ್ಷ ಜೈಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಗಾಯಕ ದಲೇರ್‌ ಮೆಹಂದಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಪಡೆದಿದ್ದಾರೆ.
19 ವರ್ಷಗಳಷ್ಟು ಹಳೆಯದಾದ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ದಲೇರ್ ಮೆಹಂದಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸುವ ವಿಚಾರಣಾ ನ್ಯಾಯಾಲಯವು 2018 ರ ತೀರ್ಪನ್ನು ಪಟಿಯಾಲ ಸೆಷನ್ಸ್ ನ್ಯಾಯಾಲಯ ಗುರುವಾರ ಎತ್ತಿಹಿಡಿದಿದೆ.
2003ರಲ್ಲಿ ಪಿಜನ್‌ ಪೆಲ್ಟಿಂಗ್‌ ಸಂಬಂಧಿಸಿದ ಪ್ರಕರಣದಲ್ಲಿ ದಲೇರ್ ಮೆಹಂದಿ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.

2003ರ ಸೆಪ್ಟೆಂಬರ್‌ 19ರಂದು ದಲೇರ್ ಮೆಹಂದಿಯ ಹಿರಿಯ ಸಹೋದರ ಶಂಶೇರ್ ಮೆಹಂದಿ ಅವರು ಪಿಜನ್‌ ಪೆಲ್ಟಿಂಗ್‌ ಮ್ಯೂಸಿಕ್ ಬ್ಯಾಂಡ್‌ಗಳ ಮೂಲಕ ಜನರನ್ನು ಅಕ್ರಮವಾಗಿ ವಿದೇಶಕ್ಕೆ ಕರೆದೊಯ್ದಿದ್ದಾರೆ ಎಂದು ಆರೋಪಿಸಲಾಯಿತು, ನಂತರ ಪ್ರಕರಣದಲ್ಲಿ ಎಫ್‌ಐಆರ್ ಅನ್ನೂ ದಾಖಲಿಸಲಾಗಿತ್ತು. ತನಿಖೆ ವೇಳೆ ಈ ಪ್ರಕರಣದಲ್ಲಿ ದಲೇರ್ ಮೆಹಂದಿ ಹೆಸರು ಕೂಡ ಕೇಳಿ ಬಂದಿತ್ತು. ಈತನ ವಿರುದ್ಧ 2003ರಲ್ಲಿ ಪ್ರಕರಣ ದಾಖಲಾಗಿದ್ದು, 15 ವರ್ಷಗಳ ಬಳಿಕ 2018ರಲ್ಲಿ ಕೆಳ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಇದೀಗ ಸೆಷನ್ಸ್ ನ್ಯಾಯಾಲಯವೂ ಅದನ್ನು ಎತ್ತಿ ಹಿಡಿದಿದೆ.

ದಲೇರ್‌ ಮೆಹಂದಿ ಹಾಗೂ ಅವರ ಸಹೋದರ ಶಂಶೇರ್‌ ವಿದೇಶಕ್ಕೆ ವಲಸೆ ಹೋಗಲು ಇಷ್ಟಪಡುವವರನ್ನು ತಮ್ಮ ಗಾಯನ ತಂಡವಾದ ಪಿಜನ್‌ ಪೆಲ್ಟಿಂಗ್‌ ಗ್ರೂಪ್‌ನ ಸದಸ್ಯರು ಎಂದು ಹೇಳುವ ಮೂಲಕ ಅವರನ್ನು ವಿದೇಶಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಆ ಬಳಿಕ ಭಾರತಕ್ಕೆ ವಾಪಸಾಗುವ ವೇಳೆ ಅವರನ್ನು ಅಲ್ಲಿಯೇ ಬಿಟ್ಟು ಬರುತ್ತಿದ್ದರು. ಹೀಗೆ ಸಾಕಷ್ಟು ಹಣ ಪಡೆದುಕೊಂಡು, ತಮ್ಮ ಗಾಯ ತಂಡದ ಸದಸ್ಯರೆನಿಸಿಕೊಂಡ ವ್ಯಕ್ತಿಗಳನ್ನು ವಿದೇಶದಲ್ಲಿ ಬಿಟ್ಟುಬಂದ ಆರೋಪವನ್ನು ಇವರಿಬ್ಬರ ಮೇಲೆ ಮಾಡಲಾಗಿತ್ತು. ಇನ್ನೂ ಕೆಲವರು ಪಿಜನ್‌ ಪೆಲ್ಟಿಂಗ್‌ ಗ್ರೂಪ್‌ಗೆ ಹಣ ನೀಡಿದ್ದರೂ, ಈ ಸಹೋದರರು ಅವರನ್ನು ವಿದೇಶಕ್ಕೆ ಕರೆದೊಯ್ದಿರಲಿಲ್ಲ. ಅಂಥವರು ನೀಡಿದ ದೂರಿನ ಬಳಿಕ ಈ ಹಗರಣ ಬೆಳಕಿಗೆ ಬಂದಿತ್ತು.

ಈ ಪ್ರಕರಣದಲ್ಲಿ ಸೋದರರಿಬ್ಬರ ಮೇಲೆ ಒಟ್ಟಾರೆ 31 ಪ್ರಕರಣ ದಾಖಲಾಗಿದೆ. 1998 ಮತ್ತು1999 ರ ನಡುವೆ, ದಲೇರ್ ಮೆಹೆಂದಿ ಸ್ಯಾನ್ ಫ್ರಾನ್ಸಿಸ್ಕೋ ಮತ್ತು ನ್ಯೂಜೆರ್ಸಿಯಲ್ಲಿ ಕನಿಷ್ಠ 10 ಜನರನ್ನು ಅಕ್ರಮವಾಗಿ ಬಿಟ್ಟು ಬಂದಿದ್ದರು. ಇದರ ನಂತರ ದಲೇರ್ ಮೆಹಂದಿ ಮತ್ತು ಅವರ ಸಹೋದರ ಶಂಶೇರ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಬಳಿಕ ಇಬ್ಬರು ಸಹೋದರರ ವಿರುದ್ಧ ಸುಮಾರು 35 ದೂರುಗಳು ದಾಖಲಾಗಿವೆ. ಅವರ ಸಹೋದರ ಶಂಶೇರ್‌ ಮೆಹಂದಿ 2005ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸಹೋದರರಿಬ್ಬರೂ ವಿದೇಶಕ್ಕೆ ಜನರನ್ನು ಕರೆದುಕೊಂಡು ಹೋಗಲು 1 ಕೋಟಿ ರೂ. ಶುಲ್ಕ ವಿಧಿಸುತ್ತಿದ್ದರು. ಆದರೆ, ಅವರು ಎಂದಿಗೂ ತಮ್ಮ ಡೀಲ್‌ಗಳನ್ನು ಪೂರೈಸಲಿಲ್ಲ ಹಾಗೂ ಹಣವನ್ನು ವಾಪಸ್‌ ಮಾಡಿರಲಿಲ್ಲ. 2006ರಲ್ಲಿ ದೆಹಲಿಯ ಕನ್ನಾಟ್‌ ಪ್ಲೇಸ್‌ನಲ್ಲಿರುವ ಅವರ ಕಚೇರಿಯ ಮೇಲೆ ದಾಳಿ ನಡೆಸಿದ್ದಲ್ಲದೆ, ಪಾಸೇಜ್‌ ಹಣ ಹಾಗೂ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.

2018 ರಲ್ಲಿ, ಪಂಜಾಬ್‌ನ ಪಟಿಯಾಲ ನ್ಯಾಯಾಲಯವು 2003 ರ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ದಲೇರ್‌ನನ್ನು ತಪ್ಪಿತಸ್ಥನೆಂದು ಘೋಷಣೆ ಮಾಡಿಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಆದರೆ, ಶಿಕ್ಷೆ ಪ್ರಕಟವಾದ 30 ನಿಮಿಷದಲ್ಲಿಯೇ ನ್ಯಾಯಾಲಯದಿಂದ ಅವರಿಗೆ ಜಾಮೀನು ಸಿಕ್ಕಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!