spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, September 28, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತಿರುಪತಿ ದೇವಾಲಯದ ಹುಂಡಿ ಎಣಿಕೆ : 24 ಗಂಟೆಯಲ್ಲಿ ಭಾರೀ ಪ್ರಮಾಣದ ಆದಾಯ ಸಂಗ್ರಹ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೊರೋನಾ ಎರಡನೇ ಅಲೆಯ ಲಾಕ್‌ಡೌನ್ ನಂತರ ಇದೀಗ ದೇವಾಲಯಕ್ಕೆ ಆಗಮಿಸಲು ಭಕ್ತರಿಗೆ ಅವಕಾಶ ದೊರೆತಿದ್ದು, ನಿನ್ನೆ ಒಂದೇ ದಿನದಲ್ಲಿ ತಿರುಪತಿ ದೇವಾಲಯದ ಹುಂಡಿಯಲ್ಲಿ  ಭಾರೀ ಪ್ರಮಾಣದ ಆದಾಯ ಸಂಗ್ರಹವಾಗಿದೆ.
ಕಳೆದ 24  ಗಂಟಯಲ್ಲಿ ದೇವರ ಹುಂಡಿಯಲ್ಲಿ 1.80 ಕೋಟಿ ಹಣ ಸಂಗ್ರಹವಾಗಿದೆ. 20,421 ಭಕ್ತರು ನಿನ್ನೆ ದೇವರ ದರ್ಶನ ಪಡೆದಿದ್ದು,9528 ಮಂದಿ ದೇವರಿಗೆ ತಲೆಕೂದಲು ಸಮರ್ಪಣೆ ಮಾಡಿದ್ದಾರೆ.

ಕೊರೋನಾಗೂ ಮುನ್ನ ದೇವಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ 60 ಸಾವಿರಕ್ಕೂ ಹೆಚ್ಚು ಇರುತ್ತಿತ್ತು. ಹಾಗಾಗಿ 3.5 ರಿಂದ 5 ಕೋಟಿ ರೂ.ವರೆಗೆ ಹುಂಡಿಯಲ್ಲಿ ಹಣ ಸಂಗ್ರಹವಾಗುತ್ತಿತ್ತು. ಕೊರೋನಾ ಹಿನ್ನೆಲೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಆಗಮಿಸುವವರ ಸಂಖ್ಯೆ ಕಡಿಮೆಯಾಗಿದೆ.

2021ರ ಜನವರಿಯಲ್ಲಿ 83.92 ಕೋಟಿ ರೂ.ಫೆಬ್ರವರಿಯಲ್ಲಿ 90.45 ಕೋಟಿ ರೂ.ಮಾರ್ಚ್ ನಲ್ಲಿ 100 ಕೋಟಿ ರೂ. ಗಡಿ ದಾಟಿತು ಮತ್ತು ಆ ಮೂಲಕ 104.42 ಕೋಟಿ ರೂಪಾಯಿ ಹುಂಡಿ ಹಣ ಸಂಗ್ರಹವಾಗಿತ್ತು. ಆದರೆ ಮತ್ತೆ ಕೊರೊನಾ ಎರಡನೇ ಅಲೆ ಕಾಣಿಸಿಕೊಂಡಿದ್ದು, ಪುನಃ ಈಗ ಅನ್​ಲಾಕ್​ ಆಗಿ ದೇವಾಲಯ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss