Friday, August 12, 2022

Latest Posts

ತೌಕ್ತೆ ಚಂಡಮಾರುತ ಎಫೆಕ್ಟ್ : ಅಂಕೋಲಾದಲ್ಲಿ ಕಡಲ ಭೋರ್ಗರೆತಕ್ಕೆ ತೀರದ ಮನೆಗಳಿಗೆ ನೀರು ನುಗ್ಗಿ ಜಖಂ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸ ದಿಗಂತ ವರದಿ, ಅಂಕೋಲಾ:

ಹವಾಮಾನ ವೈಪರಿತ್ಯದಿಂದ ಅರಬ್ಬೀ ಸಮುದ್ರದಲ್ಲಿ ಉಂಟಾದ ತೌಕ್ತೆ ಚಂಡಮಾರುತದ ಪರಿಣಾಮವಾಗಿ ಅಂಕೋಲಾ ತಾಲೂಕಿನಲ್ಲಿ ಕಡಲ ಅಬ್ಬರ ಹೆಚ್ಚಾಗತೊಡಗಿದ್ದು ತಾಲೂಕಿನ ವಿವಿಧ ಭಾಗಗಳಲ್ಲಿ ಕಡಲ ತೀರದಲ್ಲಿನ ಮನೆಗಳಿಗೆ ಸಮುದ್ರದ ನೀರು ನುಗ್ಗಿ ಹಾನಿ ಸಂಭವಿಸಿದೆ.
ಕಡಲ ಅಲೆಗಳು ಆಳೆತ್ತರದಲ್ಲಿ ಭೋರ್ಗರೆಯುತ್ತಾ ನುಗ್ಗಿ ಬರುತ್ತಿದ್ದು, ಇಲ್ಲಿನ ಬಹುತೇಕ ಕಡಲ ತೀರಗಳನ್ನು ನುಂಗಿ ಹಾಕಿರುವಂತ ವಾತಾವರಣ ಕಂಡು ಬರುತ್ತಿದ್ದು ಬೆಳಂಬಾರ, ಹಾರವಾಡ, ಬೇಲೆಕೇರಿ ಮಂಜಗುಣಿ ಮೊದಲಾದ ಕಡೆ ಸಮುದ್ರ ತೀರದ ಮನೆಗಳಿಗೆ ನೀರು ನುಗ್ಗಿದ್ದು ಜನರು ಮನೆ ಬಿಟ್ಟು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ.
ಶನಿವಾರ ಮುಂಜಾನೆ ಮಂದಗತಿಯಲ್ಲಿ ಆರಂಭವಾದ ಗಾಳಿ, ಮಳೆ ಸಂಜೆ ಸಮಯದಲ್ಲಿ ತೀವ್ರತೆಯನ್ನು ಪಡೆದುಕೊಂಡಿದ್ದು
ಇಲ್ಲಿನ ಪ್ರಮುಖ ಕಡಲ ತೀರಗಳಲ್ಲಿ ಬೃಹತ್ ಗಾತ್ರದ ಅಲೆಗಳು ಮುನ್ನುಗ್ಗಿ ಬರತೊಡಗಿದ್ದು, ಕಡಲ ಭೋರ್ಗರೆತಕ್ಕೆ ತೀರದಲ್ಲಿ ವಾಸ ಮಾಡುತ್ತಿರುವವರು ಭಯಭೀತರಾಗಿದ್ದಾರೆ.
ಅನೇಕ ಕಡೆಗಳಲ್ಲಿ ಮೀನುಗಾರರ ಬೋಟ್ ಶೆಡ್, ಮತ್ತು ಬಲೆಗಳಿಗೆ ಸಹ ಕಡಲ ಅಲೆಗಳ ಹೊಡೆತದಿಂದ ಹಾನಿ ಸಂಭವಿಸಿದೆ.
ಕಡಲ ಅಬ್ಬರಕ್ಕೆ ತಾಲೂಕಿನ ಕೆಲವು ಕಡೆಗಳಲ್ಲಿ ಕೃಷಿ ಭೂಮಿಗೆ ಸಹ ನೀರು ನುಗ್ಗಿದ್ದು, ಸಗಡಗೇರಿಯಲ್ಲಿ ಗಂಗಾವಳಿ ನದಿ ಉಕ್ಕಿ ಕೃಷಿ ಭೂಮಿಗೆ ಹರಿದು ತೀವ್ರ ಹಾನಿ ಉಂಟಾಗಿರುವ ಕುರಿತು ಮಾಹಿತಿ ಲಭಿಸಿದೆ.
ಗಾಳಿ ರಭಸಕ್ಕೆ ಅನೇಕ ಕಡೆಗಳಲ್ಲಿ ಕೊಯ್ಲಿಗೆ ಬಂದ ಮಾವಿನ ಕಾಯಿಗಳು ಉದುರಿ ಹೋಗಿರುವುದರಿಂದ ತಾಲೂಕಿನಲ್ಲಿ ಮಾವು ಬೆಳೆಗಾರರು ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss