ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ರಾಜ್ಯದಲ್ಲಿ ಇನ್ನೂ ಮೂರು ದಿನಗಳ ಕಾಲ ತೌಕ್ತೆ ಚಂಡ ಮಾರುತದ ಎಫೆಕ್ಟ್ ಮುಂದುವರೆಯಲಿದ್ದು ವಿಪತ್ತು ನಿರ್ವಹಣೆಗಾಗಿ ಇಂದು ಕರಾವಳಿ ಭಾಗಕ್ಕೆ ಉಪಕರಣಗಳನ್ನ ರವಾನೆ ಮಾಡಲಾಗಿದೆ.
ಬೆಂಗಳೂರಿನ ಹಲಸೂರಿನಲ್ಲಿರುವ ಫೈರ್ & ಎಮರ್ಜೆನ್ಸಿ ಕಚೇರಿಯಲ್ಲಿ ಈ ಉಪಕರಣಗಳನ್ನ ಗೃಹ ಸಚಿವ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದಾರೆ.
ಒಟ್ಟು 20 ಕೋಟಿ ಮೌಲ್ಯದ 50 ಕ್ಕೂ ಹೆಚ್ಚು ಟಾಪ್ ಎಂಡ್ ಉಪಕರಣಗಳನ್ನ ಸರ್ಕಾರ ಖರೀದಿ ಮಾಡಿದೆ.
ಇನ್ನು ಈ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಡಿಜಿ & ಐಜಿಪಿ ಪ್ರವೀಣ್ ಸೂದ್ ಸೇರಿ ಹಲವು ಅಧಿಕಾರಿಗಳು ಭಾಗಿಯಾಗಿದ್ದರು. ರಾಜ್ಯ ಅಗ್ನಿಶಾಮಕ ದಳ, SDRF, ಗೃಹ ರಕ್ಷಕ ದಳ ಹಾಗೂ ಪೌರ ರಕ್ಷಣೆ ದಳಗಳಿಗೆ ಈ ಉಪಕರಣಗಳನ್ನ ಹಂಚಿಕೆ ಮಾಡಲಾಗಿದ್ದು ಇಂದು ರಾತ್ರಿಯೇ ಕರಾವಳಿ ಭಾಗಕ್ಕೆ ಇವು ರವಾನೆಯಾಗಲಿವೆ.