ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………….
ಹೊಸದಿಗಂತ ಆನ್ ಲೈನ್ ಡೆಸ್ಕ್:
ರಾಜ್ಯದ ಕರಾವಳಿಯ ತೌಕ್ತೆ ಚಂಡಮಾರುತ ಅಬ್ಬರಕ್ಕೆ ಈ ವರೆಗೆ 6 ಜನರು ಸಾವನ್ನಪ್ಪಿದ್ದರೇ, 22 ಜಿಲ್ಲೆಗಳ 121 ಹಳ್ಳಿಗಳಲ್ಲಿ ಹಾನಿ ಉಂಟಾಗಿದೆ ಎಂಬುದಾಗಿ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಸಂಸ್ಥೆ ಮಾಹಿತಿ ನೀಡಿದೆ.
ಈ ಕುರಿತಂತೆ ಮಾಹಿತಿ ನೀಡಿರುವಂತ KSNDMCಯು ತೌಕ್ತೆ ಚಂಡಮಾರುತದಿಂದಾಗಿ ರಾಜ್ಯ 22 ತಾಲೂಕಿನ 121 ಹಳ್ಳಿಗಳಲ್ಲಿ 333 ಮನೆಗಳಿಗೆ ಹಾನಿಯಾಗಿದೆ. 30 ಎಕ್ಟೇರ್ ನಲ್ಲಿನ ಬೆಳೆ ನಾಶವಾಗಿದೆ. 57 ಕಿಲೋ ಮೀಟರ್ ರಸ್ತೆ ಹಾನಿಗೊಂಡಿದೆ ಎಂದು ತಿಳಿಸಿದೆ.
ಸಧ್ಯ ಅರಬ್ಬಿ ಸಮುದ್ರದ ತೌಕ್ತೆ ಚಂಡಮಾರುತ ಗುಜರಾತ್ ಕಡೆಗೆ ಮುಖಮಾಡಿರುವುದರಿಂದ ರಾಜ್ಯದಲ್ಲಿ ಮಳೆಯ ಅಬ್ಬರ ಕಡಿಮೆಯಾಗುತ್ತಿದೆ.
ರಾಜ್ಯದಲ್ಲಿ ಹಾನಿ ಉಂಟುಮಾಡಿದ ಒಟ್ಟು ವಿವರ:
ಹಾನಿಯಾದ ತಾಲೂಕುಗಳು – 22
ಒಟ್ಟು ಮನೆಗಳಿಗೆ ಹಾನಿ – 333
ಗುಡಿಸಲು – 57
ಹಳ್ಳಿಗಳು – 121
ಜನರ ಜೀವ ಹಾನಿ – 6 ಮಂದಿ ಸಾವು
ಪ್ರಾಣಿಗಳ ಸಾವು – 0
ಕೃಷಿ ಬೆಳೆ ನಷ್ಟ – 30 ಹೆಕ್ಟೇರ್
ತೋಟಗಾರಿಕಾ ಬೆಳೆ ನಷ್ಟ – 2.87 ಹೆಕ್ಟೇರ್
ರ್ಬೋಟ್ಗಳಿಗೆ ಹಾನಿ – 104
ರಸ್ತೆ ಹಾನಿ – 57 ಕಿ.ಮೀ
ವಿದ್ಯತ್ ಕಂಬಗಳ ಹಾನಿ – 644
ಟ್ರಾನ್ಸ್ಫಾರ್ಮ್ ಹಾನಿ – 147
ಒಟ್ಟು ಜನರ ಸ್ಥಳಾಂತರ – 547
ತಾತ್ಕಾಲಿಕ ನೆರೆಪರಿಹಾರ ಕೇಂದ್ರ – 13
ನೆರೆಪರಿಹಾರ ಕೇಂದ್ರದಲ್ಲಿರುವವರ ಸಂಖ್ಯೆ – 290