ಹೆಂಡತಿಗೆ ಇನ್ಸ್ಟಾ ರೀಲ್ಸ್​ ಹುಚ್ಚು, ಬೇಸತ್ತು ಕತ್ತು ಹಿಸುಕಿ ಕೊಂದುಹಾಕಿದ ಗಂಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹೆಂಡತಿ ಸದಾಕಾಲ ಇನ್ಸ್ಟಾಗ್ರಾಂ ಲೀಲ್ಸ್‌ ಮಾಡುತ್ತಿರುವುದರಲ್ಲಿ ಮುಳುಗಿದ್ದರಿಂದ ಬೇಸತ್ತುಹೋದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು ಹಾಕಿದ್ದಾನೆ.
ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯನ್ನು ಬಂಧಿಸಲಾಗಿದೆ. ದಿಂಡುಗಲ್‌ನ 38 ವರ್ಷದ ಅಮೃತಲಿಂಗಂ ಚಿತ್ರಾಳನ್ನು ಮದುವೆಯಾಗಿ ತಿರುಪುರದ ಸೆಲ್ಲಂ ನಗರದಲ್ಲಿ ವಾಸಿಸುತ್ತಿದ್ದರು. ಇವರು ತೆನ್ನಂ ಪಾಳಯಂ ತರಕಾರಿ ಮಾರುಕಟ್ಟೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ. ಆತನ ಪತ್ನಿ ಚಿತ್ರಾ ಅವರು ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್‌ಗಳನ್ನು ಪೋಸ್ಟ್ ಮಾಡುವ ಅಭ್ಯಾಸವನ್ನು ಹೊಂದಿದ್ದರು. ರೀಲುಗಳನ್ನು ಪೋಸ್ಟ್ ಮಾಡುವ ಅಭ್ಯಾಸದ ಬಗ್ಗೆ ಅಮೃತಲಿಂಗಂ ಚಿತ್ರಾ ಅವರೊಂದಿಗೆ ಹಲವಾರು ಬಾರಿ ಜಗಳವಾಡಿದ್ದರು. ಆಕೆ ಅದರಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾಲೆ ಎಂಬುದು ಆತನ ದೂರಾಗಿತ್ತು.
ಇನ್ಸ್ಟಾಗ್ರಾಂ ನಲ್ಲಿ ಹೆಚ್ಚಿನ ಅನುಯಾಯಿಗಳು ಮತ್ತು ಸಂಪರ್ಕಗಳನ್ನು ಪಡೆದಿದ್ದ ಚಿತ್ರ ನಟನೆಯಲ್ಲಿ ತನ್ನ ವೃತ್ತಿಜೀವನವನ್ನು ಮುಂದುವರಿಸಲು ನಿರ್ಧರಿಸಿದ್ದಳು. ಇದಕ್ಕಾಗಿ ಚಲನ ಚಿತ್ರದಲ್ಲಿ ಅವಕಾಶ ಪಡೆಯಲು ಎರಡು ತಿಂಗಳ ಹಿಂದೆ ಚೆನ್ನೈಗೆ ತೆರಳಿದ್ದಳು. ಆಕೆಯ ಇನ್ಸ್ಟಾ ಖಾತೆಯಲ್ಲಿ 33.3 ಸಾವಿರ ಅನುಯಾಯಿಗಳನ್ನು ಹೊಂದಿದ್ದಳು.
ಕಳೆದ ವಾರ, ಆಕೆ ತನ್ನ ಮಗಳ ಮದುವೆಗೆ ಹಾಜರಾಗಲು ಹಿಂದಿರುಗಿದ್ದಳು. ಕಾರ್ಯಕ್ರಮದ ನಂತರ, ಅವಳು ಚೆನ್ನೈಗೆ ಹೊರಡಲು ತಯಾರಾಗುತ್ತಿದ್ದಳು, ಆದರೆ ಅಮೃತಲಿಂಗಂಗೆ ಅವಳು ಹೋಗುವುದು ಇಷ್ಟವಿರಲಿಲ್ಲ.
ಚಿತ್ರಾ ಅವರ ರೀಲ್‌ಗಳನ್ನು ಅಪ್‌ಲೋಡ್ ಮಾಡುವ ಅಭ್ಯಾಸ ಮತ್ತು ಚಲನಚಿತ್ರಗಳಲ್ಲಿ ನಟಿಸಲು ಬಯಸಿದ್ದಕ್ಕಾಗಿ ಭಾನುವಾರ ರಾತ್ರಿ ಅವರ ನಡುವೆ ಜಗಳ ನಡೆದಿತ್ತು. ಘರ್ಷಣೆಯು ವಿಕೋಪಕ್ಕೆ ತಿರುಗಿ ಅಮೃತಲಿಂಗಂ ಚಿತ್ರಾಳನ್ನು ಅವಳ ಶಾಲಿನಿಂದಲೇ ಉಸಿರುಗಟ್ಟಿಸಿದ್ದಾನೆ. ಆಕೆ ಮೂರ್ಛೆ ಬಿದ್ದಾಗ ಅಮೃತಲಿಂಗಂ ಗಾಬರಿಗೊಂಡು ಮನೆಯಿಂದ ಹೊರಟು ಹೋಗಿದ್ದಾನೆ. ಈ ವೇಳೆ ಎದುರಿಗೆ ಸಿಕ್ಕಿದ ಮಗಳಿಗೆ  ಚಿತ್ರಾಗೆ ಹೊಡೆದಿರುವುದಾಗಿ ತಿಳಿಸಿದ್ದಾರೆ. ಮಗಳ ಪರೀಕ್ಷಿಸಲು ಹೋದಾಗ ಚಿತ್ರಾ ಶವವಾಗಿ ಪತ್ತೆಯಾಗಿದ್ದಾಳೆ. ಆಕೆ ಈವೇಳೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ. ಪೆರುಮಾನಲ್ಲೂರಿನಲ್ಲಿ ಅಮೃತಲಿಂಗಂನನ್ನು ಬಂಧಿಸಕಲಾಗಿದೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!