spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇಬ್ಬರು ಹೆಂಡ್ತೀರ ಮುದ್ದಿನ ಗಂಡ: ಒಬ್ಬಳು ಭಾವಿ ಪತ್ನಿ, ಮತ್ತೊಬ್ಬಳು ಮಾಜಿ ಲವರ್!

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಅತಿ ಹೆಚ್ಚು ಪ್ರೀತಿಸಿ ದೂರವಾದ ಗರ್ಲ್‌ಫ್ರೆಂಡ್ ನಿಮ್ಮದೇ ಮದುವೆ ದಿನ, ನಿಮ್ಮ ಮುಂದೆ ಬಂದು ನಿಂತು ‘ನನ್ನನ್ನೂ ಮದುವೆಯಾಗು’ ಎಂದರೆ?
ಇದು ಸಿನಿಮಾ ಸೀಕ್ವೆನ್ಸ್ ಖಂಡಿತಾ ಅಲ್ಲ, ಇಂಡೋನೇಷಿಯಾದಲ್ಲಿ ನಡೆದ ನೈಜ ಘಟನೆ.
ಸಾಮಾಜಿಕ ಜಾಲತಾಣಗಳಿಂದ ತನ್ನ ಎಕ್ಸ್ ಬಾಯ್‌ಫ್ರೆಂಡ್ ಮದುವೆ ಎಂದು ಅರಿತ ಪ್ರೇಯಸಿ ಸೀದ ಮದುವೆ ಮನೆ ತಲುಪಿದ್ದಾಳೆ.
ಎಕ್ಸ್‌ಬಾಯ್‌ಫ್ರೆಂಡ್ ಕೋರಿಕ್ ಅಕ್ಬರ್ ಮದುವೆ ಫಿಕ್ಸ್ ಆದ ಹುಡುಗಿ ನೂರ್ ಖುಷ್ನುಲ್ ಹಾಗೂ ಮಾಜಿ ಪ್ರೇಯಸಿ ಯುನಿರಾ ರೂರಿ ಇಬ್ಬರನ್ನೂ ವರಿಸಿದ್ದಾನೆ.
2016 ರಲ್ಲಿ ಯುನಿತಾ ಹಾಗೂ ಕೋರಿಕ್‌ನ ಬ್ರೇಕಪ್ ಆಗಿತ್ತು. ಸಡನ್ ಆಗಿ ಹಳೆ ಹುಡುಗಿಯನ್ನ ಕಂಡ ಕೋರಿಕ್ ಶಾಕ್ ಆಗಿದ್ದಾನೆ. ಭಾವಿ ಪತ್ನಿ ಹಾಗೂ ಮನೆಯವರ ಜೊತೆ ಮಾತನಾಡಿ ಇಬ್ಬರನ್ನು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾನೆ.
ಕೋರಿಕ್ ಮದುವೆಯ ನಂತರ ತಾನು ತೆಗೆದುಕೊಂಡ ನಿರ್ಧಾರಕ್ಕೆ ಪಶ್ಚಾತ್ತಾಪ ಪಟ್ಟಿದ್ದಾನೆ. ಕೈಯಲ್ಲಿ ಕೆಲಸವೇ ಇಲ್ಲದೆ ಇಬ್ಬರು ಹೆಂಡತಿಯರನ್ನು ಹೇಗೆ ಸಾಕಲಿ ಎಂದು ಕೋರಿಕ್ ತಲೆ ಮೇಲೆ ಕೈ ಹೊತ್ತಿದ್ದಾರೆ.
ಇದನ್ನು ಮದುವೆ ಮುಂಚೆ ಆಲೋಚನೆ ಮಾಡಿದ್ರೆ ಆಗಿ ಹೋಗ್ತಿತ್ತು ಅಲ್ವಾ?

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss