Thursday, February 25, 2021

Latest Posts

ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಚುನಾವಣೆ: ಕುಸಿದ ಆಡಳಿತ ವ್ಯವಸ್ಥೆ

ಹೊಸದಿಗಂತ ವರದಿ, ಕಲಬುರಗಿ:

ಕಲ್ಯಾಣ ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಇಂದು ಸಂಪೂರ್ಣವಾಗಿ ಆಡಳಿತ ಯಂತ್ರ ಕುಸಿದು ಅಧೋಗತಿಗೆ ತಲುಪಿದ್ದು, ಇದನ್ನು ಮನಗೊಂಡು ಸಂಸ್ಥೆಯ ಹಿತೈಷಿಗಳು ಹಾಗೂ ಎಲ್ಲ ಹಿರಿಯ ಸದಸ್ಯರು ನನ್ನನ್ನು ಈ ಬಾರಿಯ ಚುನಾವಣೆಗೆ ಅಧ್ಯಕ್ಷನಾಗಲು ಹಾಗೂ ನಿಮ್ಮ ನೇತ್ರತ್ವದ ಪ್ಯಾನಲ್ ಆಡಳಿತದಲ್ಲಿದ್ದರೆ ಸಂಸ್ಥೆಯ ಅಭಿವೃದ್ಧಿಯಾಗುತ್ತದೆ ಎಂದು ಕೇಳಿಕೊಂಡಾಗ ನಾನು ಕಣಕ್ಕೆ ಇಳಿದಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಹೇಳಿದ್ದಾರೆ.

ಅವರು ಮಂಗಳವಾರ ನಮ್ಮ ಸ್ವಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗಾಗಿ ಮಹಾದೇವಪ್ಪ ರಾಂಪೂರೆ ಅವರು ಈ ಸಂಸ್ಥೆಯನ್ನು ಹುಟ್ಟು ಹಾಕಿದರು, ಆದರೆ ಇಂದು ಸಂಸ್ಥೆಯೂ ಅವರ ಕನಸನ್ನು ಇಡೇರಿಸದೇ ಸ್ವಹಿತಾಸಕ್ತಿಯ ಕೇಂದ್ರವನ್ನಾಗಿ ಮಾಡಿಕೊಂಡು ಸಂಸ್ಥೆಯ ಮುಖ್ಯ ಉದ್ದೇಶವನ್ನೇ ಬಲಿಕೊಡುತ್ತಿದ್ದಾರೆ ಎಂದರು.

ಶಿಕ್ಷಣ ಸಂಸ್ಥೆಗಳ ಕಟ್ಟಡಗಳನ್ನು ನಿಯಮಾನುಸಾರ ಯಾವುದೇ ಟೆಂಡರ್ ಪ್ರಕ್ರಿಯೆಗಳನ್ನು ಮಾಡದೇ ನಿರ್ಮಾಣ ಕಾಮಗಾರಿಗಳನ್ನು ಮಾಡಿರುತ್ತಾರೆ. ಇದರಲ್ಲಿ ಅವ್ಯವಹಾರದ ಶಂಕೆ ವ್ಯಕ್ತವಾಗುತ್ತಿದೆ. ಮೊದಲು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯವರಿಗೆ ತುಟ್ಟಿ ಭತ್ಯೆಯನ್ನು ಕಾಲಕಾಲಕ್ಕೆ ನೀಡಲಾಗುತ್ತಿತು. ಆದರೆ ಈಗ ಚುನಾವಣೆ ಸಂದರ್ಭ ಮಾತ್ರ ಇರುವುದುದರಿಂದ 5% ತುಟ್ಟಿ ಭತ್ಯೆಯನ್ನು ಭೋಧಕರ ಸಿಬ್ಬಂದಿಯವರಿಗೆ ನೀಡಲಾಗುತ್ತಿದೆ ಎಂದರು.

ಸಂಸ್ಥೆಯಲ್ಲಿ ಗ್ರ್ಯಾಚುಟಿ ಬಹಳ ದಿನಗಳಿಂದ ಬಾಕಿ ಉಳಿದಿದೆ. ನಗರದ ಸಂಗಮೆಶ್ವರ ಆಸ್ಪತ್ರೆಯನ್ನು ಗಮನಿಸಿದಾ ಇದು ಆಸ್ಪತ್ರೆಯೋ ಎನ್ನಿಸದೇ ಅವ್ಯವಸ್ಥೆ ಅಗರವಾಗಿದೆ ಎಂದು ಎನಿಸುತ್ತಿದೆ ಎಂದರು. ಸಂಸ್ಥೆಯೂ ಬಡ ರೋಗಿಗಳ ಸಲುವಾಗಿ ಈ ಆಸ್ಪತ್ರೆಯನ್ನು ಪ್ರಾರಂಭಗೊಳಿಸಿದೆ. ದಿನಾಲು 20 ರಿಂದ 30 ಒಳರೋಗಗಳು ದಾಖಲಾಗುತ್ತಾರೆ, ಆದರೆ ಈಗ 2 ರಿಂದ 4 ರೋಗಿಗಳ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿ ಹೋಗಿದೆ ಎಂದರು.

ನಾಮ ನಿರ್ದೇಶಿತ ಸದಸ್ಯರು ನಂತರ ನೇಮಕಗೊಂಡ ಸಹಾಯಕ ಪ್ರಾದ್ಯಪಕರು ನಿಯಮಾನುಸಾರ ಪ್ರಾಧ್ಯಪಕರಾಗಿರಬೇಕು. ಆದರೆ ಇದರಲ್ಲಿ ಅವ್ಯವಹಾರ ಕಂಡು ಬರುತ್ತಿದೆ ಎಂದು ದೂರಿದರು. ಈ ಸಂಸ್ಥೆಯ ಶಿಕ್ಷಣ ಗುಣಮಟ್ಟ ಪೂರ್ತಿಯಾಗಿ ಕುಸಿದು ಬಿದ್ದು ಹೋಗಿದೆ. ಆಡಳಿತ ಯಂತ್ರ ಸಂಪೂರ್ಣವಾಗಿ ಹದಗೆಟ್ಟಿದೆ. ಆದರೆ ಪಿಡಿಯೆ ಇಂಜಿನಿಯರಿಂಗ್ ಕಾಲೇಜಿನಲ್ಲಿ 250 ಸೀಟುಗಳು ಖಾಲಿ ಉಳಿದಿರುತ್ತವೆ ಎಂದು ಹೇಳಿದರು. ಹಲವು ವಿಷಯಗಳನ್ನು ಗಮನಿಸಿದಾಗ ಸಂಸ್ಥೆಯ ಆಡಳಿತದ ಹಿರಿಯ ಕಾರ್ಯದರ್ಶಿಗಳ ಮನವಿಯಂತೆ ನಾನು ಅಧ್ಯಕ್ಷ ಸ್ಥಾನಕ್ಕೆ ನಿಂತಿದ್ದು, ಸಂಸ್ತೆಯ ಎಲ್ಲರಲ್ಲಿ ಕೇಳಿಕೊಳ್ಳುವುದೊಂದೆ ನಮ್ಮ ಪ್ಯಾನಲ್ ಗೆ ಮತ ನೀಡುವ ಮೂಲಕ ಸಂಸ್ಥೆಯ ಅಭಿವೃದ್ದಿಗೆ ಸಹಕರಿಸಬೇಕೆಂದ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಆರ್.ಎಸ್.ಹೊಸಗೌಡ, ಜಿ.ಡಿ.ಅನಕಲ್, ಸಂಪತಕುಮಾರ ಲೋಯಾ,ಶಿವಾನಂದ ಚುಕಿ, ಶಿವರಾಜ ನಿಗ್ಗುಡಗಿ, ಸೇರಿದಂತೆ ಹಲವು ಜನರು ಇದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!