Wednesday, August 10, 2022

Latest Posts

ಸ್ವಂತ ಖರ್ಚಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಮಾದರಿಯಾದ ವೃದ್ಧ ದಂಪತಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ತಮ್ಮ ಸ್ವಂತ ಖರ್ಚಿನಲ್ಲಿ ಹೈದರಾಬಾದ್‌ ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ವೃದ್ಧ ದಂಪತಿ ಎಲ್ಲರ ಗಮನ ಸೆಳೆದಿದ್ದಾರೆ. ಇವರ ಮಹತ್ ಕಾರ್ಯದಿಂದ ಅದೆಷ್ಟೋ ವಾಹನ ಸವಾರರ ಜೀವ ಉಳಿದಿದೆ.

ಹೌದು.. ಈ ಮಾದರಿ ಕಾರ್ಯ ಮಾಡುತ್ತಿರುವ ದಂಪತಿ ಹೈದ್ರಾಬಾದ್ ನ ಗಂಗಾಧರ್ ತಿಲಕ್ ಮತ್ತು ವೆಂಕಟೇಶ್ವರಿ. ಇವರು ಕಳೆದ 11 ವರ್ಷಗಳಿಂದ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ.

ಕಾರಿನಲ್ಲಿ ಹೋಗುವಾಗ ರಸ್ತೆ ಗುಂಡಿಗಳು ಕಾಣಿಸಿದ ತಕ್ಷಣ ಆ ಗುಂಡಿಗಳನ್ನು ಸ್ವಚ್ಛಗೊಳಿಸಿ ಮುಚ್ಚುತ್ತಾರೆ. ಇದುವರೆಗೂ 2000ಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಿದ್ದಾರೆ.

“ರಸ್ತೆ ಗುಂಡಿಗಳಿಂದ ದಿನನಿತ್ಯ ಆಗುವ ಅಪಘಾತಗಳನ್ನು ನೋಡುತ್ತಿದ್ದೆ. ಸಂಬಂಧಪಟ್ಟವರ ಗಮನಕ್ಕೂ ತಂದೆ. ಆದರೆ ಪ್ರಯೋಜನವಾಗಲಿಲ್ಲ. ಆಗ ನಾನು, ನನ್ನ ಪತ್ನಿಯೇ ಗುಂಡಿ ಮುಚ್ಚವ ಕೆಲಸ ಮಾಡತೊಡಗಿದೆವು. ನನಗೆ ಬರುವ ಪಿಂಚಣಿ ಹಣವನ್ನು ಗುಂಡಿ ಮುಚ್ಚುವ ಕೆಲಸಕ್ಕೆ  ಉಪಯೋಗಿಸುತ್ತಿದ್ದೇನೆ” ಎಂದು ನಿವೃತ್ತ ಭಾರತೀಯ ರೈಲ್ವೆ ಉದ್ಯೋಗಿ ಗಂಗಾಧರ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss