ಅಂತರ್‌ ರಾಜ್ಯ ಕಳ್ಳರನ್ನು ಬಂಧಿಸಿದ ಹೈದ್ರಾಬಾದ್‌ ಪೋಲೀಸರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳ್ಳತನದಲ್ಲಿ ತೊಡಗಿದ್ದ ಅಂತರ್‌ ರಾಜ್ಯ ಕಳ್ಳರ ಗುಂಪೊಂದನ್ನು ಬಂಧಿಸುವಲ್ಲಿ ಹೈದ್ರಾಬಾದ್‌ ಪೋಲೀಸರು ಯಶಸ್ವಿಯಾಗಿದ್ದಾರೆ. ಹೈದ್ರಾಬಾದ್‌ ಕಮಿಷನರ್ಸ್‌ ಟಾಸ್ಕ್ ಫೋರ್ಸ್‌, ಪೂರ್ವ ಮತ್ತು ದಕ್ಷಿಣ ವಿಭಾಗ ಹಾಗೂ ಅಫ್ಜಲ್‌ ಗಂಜ್‌ ಪೋಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ರಾಜಸ್ಥಾನ ಮೂಲದ ಕಳ್ಳರ ಜಾಲವನ್ನು ಭೇದಿಸಿದ್ದಾರೆ.

ಬಂಧಿತರಿಂದ 28,20,000 ರೂ ನಗದು, ಒಂದು ಬೈಕ್‌ , ಮೂರು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು ಐದು ಜನರನನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ತಪ್ಪಿಸಿಕೊಂಡಿದ್ದು ಆತನಿಗಾಗಿ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಹೈದ್ರಾಬಾದ್‌ ಪೋಲೀಸ್‌ ಕಮಿಷನರ್‌ ಸಿ.ವಿ. ಆನಂದ್‌ ಹೇಳಿದ್ದಾರೆ.

ಜೊಬ್‌ ಸಿಂಗ್‌ ಎಂಬುವವರು 50 ಲಕ್ಷ ನಗದನ್ನು ತಮ್ಮ ನೌಕರನ ಕೈಯಲ್ಲಿ ಕೊಟ್ಟು ಮನೆಗೆ ಕೊಂಡೊಯ್ಯುವಂತೆ ಹೇಳಿದ್ದರು. ಆತ ಕೊಂಡೊಯ್ಯುವಾಗ ದಾರಿಯಲ್ಲಿ ಅಪರಿಚಿತರ ಗುಂಪೊಂದು ಹಣವನ್ನು ಲಪಟಾಯಿಸಿತ್ತು. ಅವರ ದೂರಿನ ಆಧಾರದ ಮೇಲೆ ತನಿಖೆ ಪ್ರಾರಂಭಿಸಿದ ಪೋಲೀಸರು ಕಳ್ಳರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಬಂಧಿತರು ರಾಜಸ್ಥಾನ ಮೂಲದವರೆನ್ನಲಾಗಿದ್ದು ಕೆಲಸಕ್ಕೆಂದು ಹೈದ್ರಾಬಾದ್‌ ನಲ್ಲಿ ನೆಲೆಸಿದ್ದರು. ಬೇರೆ ಬೇರೆ ವೃತ್ತಿ ಮಾಡಿ ಕೊನೆಗೆ ಕುಟುಂಬ ನಿರ್ವಹಣೆಗೆ ಹಣದ ಕೊರತೆಯಿಂದಾಗಿ ಕಳ್ಳತನಕ್ಕೆ ಇಳಿದಿದ್ದರು ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!