Saturday, July 2, 2022

Latest Posts

ಹೈದರಾಬಾದ್ ನಲ್ಲೂ ಪತ್ತೆಯಾಯ್ತು ಒಮಿಕ್ರಾನ್: ಏಳು ವರ್ಷದ ಬಾಲಕ ಸೇರಿ ಮೂರು ಮಂದಿಗೆ ಸೋಂಕು ದೃಢ

ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಮೂರು ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ.
ಕೆನ್ಯಾದಿಂದ ಬಂದ 24 ವರ್ಷದ ಯುವತಿ ಹಾಗೂ ಸೊಮಾಲಿಯಾದಿಂದ ಬಂದ 23 ವರ್ಷದ ಯುವಕ ಸೇರಿದಂತೆ ಪಶ್ಚಿಮ ಬಂಗಾಳಕ್ಕೆ ತೆರಳುತ್ತಿದ್ದ 7 ವರ್ಷದ ಬಾಲಕನಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.
ಕೇಂದ್ರ ಸರ್ಕಾರದಿಂದ ಸೂಚಿಸಲಾದ 11 ರಾಷ್ಟ್ರಗಳಿಂದ ಭಾರತಕ್ಕೆ ಬರುವ ಜನರಿಗೆ ಆರ್ ಟಿಪಿಸಿಆರ್ ಪರೀಕ್ಷೆ ನಡೆಸುವುದು ಕಡ್ಡಾಯ ಮಾಡಲಾಗಿದೆ.
ಒಮಿಕ್ರಾನ್ ರೂಪಾಂತರ ಸೋಂಕು ಕೋವಿಡ್ ಗಿಂತ ವೇಗವಾಗಿ ಹರಡಲಿದ್ದು, ಎಲ್ಲರೂ ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿ ಪಾಲಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss