Saturday, April 1, 2023

Latest Posts

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಹೈಡ್ರಾಮಾ: ಏರ್ ಪೋರ್ಟ್ ಪೋಲಿಸರು – ಕಾಂಗ್ರೆಸ್ ಮುಖಂಡರ ನಡುವೆ ಮಾತಿನ ಚಕಮಕಿ

ಹೊಸದಿಗಂತ ವರದಿ ಕಲಬುರಗಿ:

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾಯ೯ಕತ೯ರಿಂದ ಹೈಡ್ರಾಮಾ ಏಪ೯ಟ್ಟಿದ್ದು,ವಿಧಾನ ಪರಿಷತ್ ಸದಸ್ಯ ಮಾಜಿ ಉಪ ಸಭಾಪತಿ ಡೇವಿಡ್ ಸಿಮೆಯನ್ ಏರ್ ಪೋರ್ಟ್ ಪ್ರವೇಶಕ್ಕೆ ನಿರಾಕರಿಸಿದ ವೇಳೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ  ಏರ್ ಪೋರ್ಟ್ ಪೋಲಿಸರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಕಲಬುರಗಿ ಏರ್ ಪೋರ್ಟ್  ಭದ್ರತಾ ಉಸ್ತುವಾರಿ,ಸಿಪಿಐ ನೂರ್ ಸಾಬ್ ಮತ್ತು ಕೈ ಕಾಯ೯ಕತ೯ರ ಮಧ್ಯೆ ವಾಗ್ವಾದ ನಡೆದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕರ ಸ್ವಾಗತಕ್ಕೆ ಕೈ ಮುಖಂಡರು ಆಗಮಿಸಿದ್ದ ಹಿನ್ನೆಲೆಯಲ್ಲಿ ಕೆ‌.ಎಸ್.ಐ.ಎಸ್.ಎಫ್.ಹಾಗೂ ಕೈ ಮುಖಂಡರ ನಡುವೆ ಏಕ ವಚನದಲ್ಲಿ ಮಾತಿನ ಚಕಮಕಿ ನಡೆದಿದೆ.

ಕಾಂಗ್ರೆಸ್ ಸಮಿತಿ ನೀಡಿದ ಪಟ್ಟಿಯಂತೆ ಮುಖಂಡರನ್ನು ಒಳಬಿಡಲಾಗುವುದು ಎಂದು ಭದ್ರತಾ ಸಿಬ್ಬಂದಿ ಹೇಳಿದ್ದಾರೆ. ಈ ವೇಳೆ ಡೇವಿಡ್ ಸಿಮೇಯನ್,ರನ್ನು ಒಳಗಡೆ ಬಿಡದ ಕಾರಣಕ್ಕೆ ಕಾಂಗ್ರೆಸ್ ಕಾಯ೯ಕತ೯ರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಬಿಜೆಪಿ ಏಜೆಂಟ್ ಆಗಿದ್ದಿರಾ ಎಂದು ಕೆ.ಎಸ್.ಐ.ಎಸ್.ಎಫ್ ಸಿಪಿಐ ವಿರುದ್ಧ ಕೈ ಮುಖಂಡರು ಕಿಡಿಕಾರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!