Thursday, August 11, 2022

Latest Posts

ಸಮಸ್ಯೆಗಳ ಪರಿಹಾರ ಬಿಟ್ಟು ಜನಪ್ರತಿನಿಧಿಗಳಿಂದ ಹೈಡ್ರಾಮ : ಚಲುವರಾಯಸ್ವಾಮಿ ಆರೋಪ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ಮಂಡ್ಯ :

ಜಿಲ್ಲೆಯಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚಿಸದೆ ಬೇಡದ ವಿಚಾರಗಳನ್ನೆತ್ತಿಕೊಂಡು ಹೈಡ್ರಾಮ ನಡೆಸಲಾಗುತ್ತಿದೆ. ಇದರಿಂದ ಜಿಲ್ಲೆಯ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಗಂಭೀರವಾಗಿ ಆರೋಪಿಸಿದರು.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಬ್ಬು ಕಟಾವಿಗೆ ಬಂದಿದೆ. ಏಪ್ರಿಲ್‌ನಿಂದಲೇ ಕಬ್ಬು ಕಟಾವು ಆಗಬೇಕಿತ್ತುಘಿ. ಈವರೆವಿಗೂ ಕಬ್ಬು ಸಾಗಾಣಿಕೆ ಬಗ್ಗೆ ಪ್ರಸ್ತಾಪವಾಗಿಲ್ಲಘಿ. ನಾಲಾ ದುರಸ್ಥಿ ನೆಪದಲ್ಲಿ ನಾಲೆಗಳಲ್ಲಿ ನೀರು ನಿಲ್ಲಿಸಲು ನಿರ್ಧರಿಸಲಾಗಿದೆ. ಇದರಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಇಂತಹ ಹಲವಾರು ಸಮಸ್ಯೆಗಳು ಜಿಲ್ಲೆಯ ಜನರನ್ನು ಕಾಡುತ್ತಿವೆ. ಆದರೆ ಇದನ್ನು ಬಿಟ್ಟು ಕೇವಲ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಅತೀ ಹಿಂದುಳಿದ ಜಿಲ್ಲೆಯಾಗಿ ಚಾಮರಾಜನಗರ ಇತ್ತುಘಿ. ಆದರೆ ಈಗ ಚಾಮರಾಜನಗರ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದರೆ, ಮಂಡ್ಯ ಜಿಲ್ಲೆ ತೀರಾ ಹಿಂದುಳಿಯುತ್ತಿದೆ. ಇದಕ್ಕೆ ರಾಜಕೀಯ ಇಚ್ಚಾಶಕ್ತಿಯ ಕೊರತೆಯೇ ಕಾರಣವಾಗಿದೆ ಎಂದು ಕಿಡಿಕಾರಿದರು.
ಜಿಲ್ಲಾಡಳಿತ ಕ್ರಮವಹಿಸಲಿ :
ಮೈಷುಗರ್ ವ್ಯಾಪ್ತಿಯಲ್ಲಿ 6 ರಿಂದ 7 ಲಕ್ಷ ಟನ್ ಕಬ್ಬು ಕಟಾವಿಗೆ ಸಿದ್ದವಾಗಿದೆ. ಕಳೆದ ಹಂಗಾಮಿನಲ್ಲಿ ಪಕ್ಕದ ಕಾರ್ಖಾನೆಗಳಿಗೆ ವಿಲೇವಾರಿ ಮಾಡಲಾಗಿದೆ. ಈ ಬಾರಿ ಪಕ್ಕದ ಬನ್ನಾರಿ ಅಮ್ಮನ್ ಕಾರ್ಖಾನೆಗೆ ಸಾಗಾಣಿಕೆ ಮಾಡಲು ತ್ವರಿತವಾಗಿ ನಿರ್ದೇಶನ ನೀಡಬೇಕು. ಕಾರ್ಖಾನೆಗಳು ಸ್ವಂತ ಖರ್ಚಿನಲ್ಲೇ ಸಾಗಾಣಿಕೆ ವೆಚ್ಚವನ್ನೂ ಭರಿಸುವುದರ ಜೊತೆಗೆ ದರ ನಿಗದಿ ಮಾಡಿ ರೈತರಿಗೆ ನೆರವಾಗಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಕಬ್ಬು ಬೆಳೆಗಾರರು, ರೈತ ಮುಖಂಡರ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಕಟ್ಟು ಪದ್ದತಿ ನೀರು ಹರಿಸಿ :
ಕಾವೇರಿ ಕೊಳ್ಳದ ಕಾಲುವೆಗಳ ಆಧುನೀಕರಣ ಮತ್ತು ದುರಸ್ಥಿಗಾಗಿ ಪ್ರಸಕ್ತ ಸಾಲಿನಲ್ಲಿ ನೀರು ನಿಲುಗಡೆ ಮಾಡಲು ಉದ್ದೇಶಿಸಿದ್ದುಘಿ, ಇದು ಅವೈಜ್ಞನಿಕ ನಿರ್ಧಾರವಾಗಿದೆ. ಮೊದಲೇ ಕೊರೋನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರ ಬದುಕು ಮತ್ತಷ್ಟು ಅತಂತ್ರವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಟ್ಟು ನೀರು ಪದ್ಧತಿಯಂತೆ ನಾಲೆಯಲ್ಲಿ ನೀರು ಹರಿಸಬೇಕು. ಈ ಹಿಂದೆ ದುರಸ್ಥಿ ಕಾರ‌್ಯ ಕೈಗೊಂಡಾಗಲೂ ಇದೇ ರೀತಿಯಲ್ಲಿ ಕೆಲಸ ಮಾಡಲಾಗಿದೆ ಎಂದು ಉದಾಹರಣೆ ಸಮೇತ ವಿವರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss