ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾ ಶೂಟಿಂಗ್ ಗಳಲ್ಲಿ ಬ್ಯುಸಿಯಾಗಿರುವ ನ್ಯಾಷನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ ಈಗ ಅಮೆರಿಕಕ್ಕೆ ತೆರಳಿದ್ದಾರೆ.
ಈ ಬಗ್ಗೆ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿರುವ ಅವರು, ನಾನು ಈಗ ನಿಮ್ಮಿಂದ ದೂರ ಹೋಗುತ್ತಿದ್ದೇನೆ. ಆದರೆ ಆದಷ್ಟು ಬೇಗ ವಾಪಾಸ್ ಆಗ್ತೀನಿ ಅಂತ ಬರೆದುಕೊಂಡಿದ್ದಾರೆ.
ಕೈನಲ್ಲಿ ಪಾಸ್ ಪೋರ್ಟ್, ಟಿಕೆಟ್ ಹಿಡಿದಿರುವ ಫೋಟೋವನ್ನು ರಶ್ಮಿಕಾ ಹಂಚಿಕೊಂಡಿದ್ದು, ನಾನೆಲ್ಲಿಗೆ ಹೋಗುತ್ತಿದ್ದೇನೆ ಎಂದು ಗೆಸ್ ಮಾಡಿ ಎಂದು ಅಭಿಮಾನಿಗಳಿಗೆ ಕೇಳಿದ್ದಾರೆ.
ತೆಲುಗು ನಟ ವಿಜಯ್ ದೇವರಕೊಂಡ ಜತೆಗೆ ಹೊಸ ಚಿತ್ರ ಲಿಗರ್ ನಲ್ಲಿ ಕಾಣಿಸಿಕೊಳ್ಳಲಿರುವ ರಶ್ಮಿಕಾ ಚಿತ್ರದ ಶೂಟಿಂಗ್ ನಿಮಿತ್ತ ಅಮೆರಿಕ ಪ್ರವಾಸ ಮಾಡಿರಬಹುದು ಎನ್ನಲಾಗಿದೆ.