ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………….
ಹೊಸದಿಗಂತ ಆನ್ ಲೈನ್ ಡೆಸ್ಕ್:
ನನಗೆ ಕೊರೋನಾ ಸೋಂಕು ತಗುಲಿಲ್ಲ. ಏಕೆಂದರೆ ನಾನು ನಿತ್ಯ ಗೋಮೂತ್ರ ಸೇವಿಸುತ್ತೇನೆ ಎಂದು ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದಾರೆ.
ದೇಸಿ ಹಸುವಿನ ಗೋ ಮೂತ್ರದ ಸಾರ ನಮ್ಮನ್ನು ಶ್ವಾಸಕೋಶದ ಸೋಂಕಿನಿಂದ ದೂರವಿರಿಸುತ್ತದೆ. ನಾನು ಪ್ರತಿದಿನ ಗೋಮೂತ್ರ ಸೇವನೆ ಮಾಡುವುದರಿಂದ ಕೊರೋನಾ ಆಗಲಿ ಬೇರಾವುದೇ ರೋಗದಿಂದಾಗಲೀ ಬಾಧಿತವಾಗಿಲ್ಲ ಹೇಳಿದ್ದಾರೆ.
“ಗೋಮೂತ್ರ ಆರ್ಕ್” ಎಂಬ ಔಷಧಿಯನ್ನು ನಾನು ಬಳಸುತ್ತಿರುವುದರಿಂದ ದೇವರು ನನ್ನನ್ನು ರಕ್ಷಿಸುತ್ತಾನೆ ಎಂದು ನಾನು ನಂಬುತ್ತೇನೆ ಎಂದು ಭೋಪಾಲ್ ಸಂಸದೆ ಹೇಳಿದ್ದಾರೆ.
ಎರಡು ವರ್ಷಗಳ ಮೊದಲು ಗೋಮೂತ್ರ ಹಾಗೂ ಇತರ ಹಸುವಿನ ಉತ್ಪನ್ನಗಳಿಂದ ತನ್ನ ಕ್ಯಾನ್ಸರ್ ಗುಣವಾಗಿತ್ತು ಎಂದು ಸಾಧ್ವಿ ಪ್ರಜ್ಞಾ ಸಿಂಗ್ ಹೇಳಿಕೊಂಡಿದ್ದರು.