ನನ್ನನ್ನು ಮಂತ್ರಿ ಮಾಡ್ತಾರೋ, ಬಿಡ್ತಾರೋ ಗೊತ್ತಿಲ್ಲ: ಶಾಸಕ ಎಸ್.ಎ ರಾಮದಾಸ್

ಹೊಸದಿಗಂತ ವರದಿ, ಮೈಸೂರು:

ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಗೊತ್ತಿಲ್ಲ. ನನ್ನನ್ನು ಮಂತ್ರಿ ಮಾಡ್ತಾರೋ, ಬಿಡ್ತಾರೋ ಗೊತ್ತಿಲ್ಲ ಎಂದು ಶಾಸಕ ಎಸ್.ಎ ರಾಮದಾಸ್ ಹೇಳಿದರು.
ಶುಕ್ರವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ ಮಂತ್ರಿ ಸ್ಥಾನ ಕೊಟ್ಟರೆ, ಇಡೀ ರಾಜ್ಯ ಸುತ್ತಿ ಕೆಲಸ ಮಾಡುತ್ತೇನೆ. ಇಲ್ಲವಾದರೆ ನನ್ನಿಂದ ಸರ್ಕಾರಕ್ಕೆ ಉಪಯೋಗವಾಗುವ ಕೆಲಸ ಮಾಡುತ್ತೇನೆ ಎಂದರು.
ಕರೆದಾಗ ಮಾತ್ರ ಊಟಕ್ಕೆ ಹೋಗುತ್ತೇನೆ. ಕರೆಯದೆ ಊಟಕ್ಕೆ ಹೋಗುವವನು ನಾನಲ್ಲ. ಮಂತ್ರಿ ಮಂಡಲ ವಿಸ್ತರಣೆ ಬೇಕಾ ಬೇಡವಾ ಅನ್ನೋ ವಿಚಾರ ನನಗೆ ಗೊತ್ತಿಲ್ಲ. ನಾನು ರಾಜ್ಯದ ಸಿಎಂ ಅಲ್ಲ, ಹಾಗಾಗಿ ನನಗೆ ಗೊತ್ತಿಲ್ಲ. ಸ್ಥಳೀಯರಿಗೆ ಸಚಿವ ಸ್ಥಾನ ನೀಡಬೇಕು. ಚಾಣಕ್ಯ, ಕಾಮರಾಜರ ಕಾಲದಿಂದಲೂ ಸ್ಥಳೀಯರಿಗೆ ಆದ್ಯತೆ ನೀಡಲಾಗುತ್ತಿದೆ. ಸಿಎಂ ಬುದ್ದಿವಂತರಿದ್ದಾರೆ, ಸಮರ್ಥರಿದ್ದಾರೆ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಮೈಸೂರಿನ ಕೆ.ಆರ್.ಕ್ಷೇತ್ರದಲ್ಲಿ ಅತ್ಯಾಧುನಿಕ ಪಾರ್ಕ್ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಪರಿಕಲ್ಪನೆ ಆಧಾರಿತ 16 ಪಾರ್ಕ್ ಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುಮೋದನೆ ಸಿಕ್ಕಿದ್ದು, ಒಟ್ಟು 24ಕೋಟಿ ವೆಚ್ಚದಲ್ಲಿ 16 ಪಾರ್ಕ್ ಗಳ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗುವುದು.
ಕನಕದಾಸ, ಪುರಂದರದಾಸ, ಅಂಬೇಡ್ಕರ್, ಆಕಾಶವಾಣಿ, ಯೋಗ, ವಿಜ್ಞಾನ, ಸಾಮರಸ್ಯ, ಸ್ಪೋರ್ಟ್್ಸ, ಮಹಿಳೆ, ಮಕ್ಕಳು ಸೇರಿದಂತೆ ವಿಷಯಾಧಾರಿತ ಪಾರ್ಕ್ ನಿರ್ಮಾಣ ಮಾಡಲಾಗುವುದು.
ವಿವಿಧ ವಿನ್ಯಾಸವುಳ್ಳ, ಸಿಸಿಟಿವಿ, ನೀರಿನ ವ್ಯವಸ್ಥೆ, ಯೋಗಮಂಟಪ, ಅತ್ಯಾಧುನಿಕ ಶೌಚಾಲಯ, ಜಿಮ್ ಉಪಕರಣ, ಸುಸಜ್ಜಿತ ಪುಟ್ ಫಾತ್ ಗಳನ್ನು ಒಳಗೊಂಡ ಪಾರ್ಕ್. ಎಲ್‌ಇಡಿ ಸ್ಕಿçÃನ್, ಸಂಗೀತ ಕೇಳಿಸುವ ಉಪಕರಣಗಳ ಅಳವಡಿಸಲಾಗುವುದು.
ಸದ್ಯ 16 ಪಾರ್ಕ್ ಅಭಿವೃದ್ಧಿಗೆ ಕ್ರಮವಹಿಸಲಾಗಿದ್ದು, ಮುಂದಿನ ದಿನಗಳಲ್ಲಿ ಉಳಿದ 92ಪಾರ್ಕ್ ಗಳ ಅಭಿವೃದ್ಧಿ. ಅಲ್ಲದೇ ಕೆ.ಆರ್.ಕ್ಷೇತ್ರದಲ್ಲಿ ಅತ್ಯುನ್ನತವಾಗಿ ಸ್ಮಶಾನ ನಿರ್ಮಾಣ ಮಾಡಲಾಗುವುದು. ಹಿರಿಯ ನಾಗರಿಕರಿಗಾಗಿ ನಾಲ್ಕು ಡೇ ಕೇರ್ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!