’ನಾ ನಾಯಕಿ’ ಎಂದರೇನು ನನಗೆ ಅರ್ಥವೇ ಆಗಿಲ್ಲ : ಸಚಿವ ಸಿ.ಸಿ.ಪಾಟೀಲ್

ಹೊಸದಿಗಂತ ವರದಿ,ಗದಗ :

ಕಾಂಗ್ರೆಸ್‌ನ ನಾ ನಾಯಕಿ ಕಾರ್ಯಕ್ರಮ ಏನು ಎಂದು ನನಗೆ ಅರ್ಥವೇ ಆಗಿಲ್ಲ, ಕಾಂಗ್ರೆಸ್‌ನವರಿಗೆ ಅರ್ಥ ಆಗಿದೇಯಾ ಅನ್ನುವುದು ಗೊತ್ತಿಲ್ಲ. ಒಬ್ಬ ನಾಯಕಿ ’ನಾ ನಾಯಕಿ’ ಎನ್ನುವ ಟೈಟಲ್‌ನಲ್ಲಿ ಕಾರ್ಯಕ್ರಮ ಮಾಡುವುದು ಹಾಸ್ಯಾಸ್ಪದವಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ ವ್ಯಂಗ್ಯವಾಡಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಿಎಂ ಆಗುವ ಕನಸನ್ನು ಪ್ರಿಯಾಂಕಾ ಗಾಂಧಿಯವರು ಕಾಣಲ್ಲ ಅನಿಸುತ್ತೆ, ಅವರು ಅಷ್ಟೇನು ದಡ್ಡರಲ್ಲ. ರಾಹುಲ್‌ಗಾಂಧಿ ಕಂಡಂತೆ ಅತಿಯಾದ ಕನಸನ್ನು ಪ್ರಿಯಾಂಕಾ ಗಾಂಧಿ ಕಾಣುವದಿಲ್ಲ ’ನಾ ನಾಯಕಿ’ ಎಂದು ಟೈಟಲ್ ಅವರು ಹಾಕಿರಲಿಕ್ಕಿಲ್ಲ. ಅವರಿಗೆ ಕನ್ನಡ ಬರುವದಿಲ್ಲ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯವರು ಹಾಕಿರಬೇಕು. ಯಾವ ಕಾರಣಕ್ಕೆ ಹಾಕಿದ್ದಾರೆ ಎನ್ನುವುದು ಗೊತ್ತಿಲ್ಲ.
ನಮ್ಮ ನಾಯಕಿ ಎಂದು ಹಾಕಬಹುದಿತ್ತು. ಪಕ್ಷದ ಅಧಿನಾಯಕಿ ಎಂದಾದರೂ ಹಾಕಬೇಕಿತ್ತು. ಅವರದ್ದೆ ಪೋಸ್ಟರ್ ಹಾಕಿ. ’ನಾ ನಾಯಕಿ’ ಎಂದು ಹಾಕಿದ್ದು ಅರ್ಥವೇ ಆಗಲಿಲ್ಲ. ಹೆಸರು ಇಟ್ಟಿದ್ದು ಯಾಕೆ ಎಂದು ಅಪಹಾಸ್ಯ ಮಾಡುತ್ತಿಲ್ಲ ಆದರೆ ನಮಗೆ ಅರ್ಥ ಆಗಿಲ್ಲ. ಅವರಿಗೆ ಅರ್ಥವಾಗಿದ್ದರೇ ಅಂದಿನ ಕಾರ್ಯಕ್ರಮದ ಬಗ್ಗೆ ಬಿಡಿಸಿ ಹೇಳಲಿ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಸಮಾವೇಶ ಕುರಿತು ಮಾತನಾಡಿದ ಸಚಿವರು ಅವರ ಪಕ್ಷ, ಅವರ ಸಂಘಟನೆಗೆ ಬರುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಆಗಮನದಿಂದಲಾದರೂ ಒಡೆದ ಕಾಂಗ್ರೆಸ್ ಒಂದಾಗಲಿ. ಸದೃಢ ವಿರೋಧ ಪಕ್ಷವಾಗಿ ಕೆಲಸ ಮಾಡುವಂತಾಗಲಿ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!