Thursday, July 7, 2022

Latest Posts

ದ್ರಾವಿಡ್​ ನಿರ್ವಹಿಸುತ್ತಿದ್ದ NCA ಮುಖ್ಯಸ್ಥ ಹುದ್ದೆ ನನಗೆ ಬೇಡ ಎಂದ ವಿವಿಎಸ್ ಲಕ್ಷ್ಮಣ್!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್​ ಅವರು ಟೀಂ ಇಂಡಿಯಾ ಮುಖ್ಯ ಕೋಚ್ ಆಗುತ್ತಿದ್ದಂತೆ, ಖಾಲಿಯಾಗಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ಸ್ಥಾನ ನನಗೆ ಬೇಡ ಎಂದು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್​ ತಿರಸ್ಕರಿಸಿದ್ದಾರೆ.
ಬಿಸಿಸಿಐ ಸಂವಿಧಾನದ ಪ್ರಕಾರ ಬೋರ್ಡ್​ ವ್ಯಾಪ್ತಿಯಲ್ಲಿ ಒಮ್ಮೆಲೆ ಎರಡು ಅಧಿಕಾರ ಪಡೆಯಲು ಅವಕಾಶವಿಲ್ಲ. ಟಿ20 ವಿಶ್ವಕಪ್​ ನಂತರ ಎನ್​ಸಿಎ ಅಧ್ಯಕ್ಷ ಸ್ಥಾನದಲ್ಲಿರುವ ದ್ರಾವಿಡ್​, ಭಾರತ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಹಾಗಾಗಿ, ಖಾಲಿಯಾಗುವ ಎನ್​ಸಿಎ ಮುಖ್ಯಸ್ಥ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯನ್ನು ಹುಡುಕಾಟ ನಡೆಸಿತ್ತು.
100ಕ್ಕೂ ಹೆಚ್ಚು ಟೆಸ್ಟ್​ ಆಡಿ ಭಾರತ ಕ್ರಿಕೆಟ್​ಗೆ ಗಮನಾರ್ಹ ಸೇವೆ ಸಲ್ಲಿಸಿರುವ ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಅವರನ್ನು ದ್ರಾವಿಡ್​ ಸ್ಥಾನ ತುಂಬಲು ಬಿಸಿಸಿಐ ಸಂಪರ್ಕಿಸಿದೆ ಎನ್ನಲಾಗಿದೆ. ಆದರೆ, ಈ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸಲು ಲಕ್ಷ್ಮಣ್ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ಲಕ್ಷ್ಮಣ್​ ಈಗಾಗಲೇ ಬೆಂಗಾಲ್ ಕ್ರಿಕೆಟ್​ ತಂಡದ ಮುಖ್ಯ ಕೋಚ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ, ಅವರು ಬಿಸಿಸಿಐ ಆಫರ್​ ತಿರಸ್ಕರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss