Wednesday, June 29, 2022

Latest Posts

ಬಿಜೆಪಿ ಪರವಾಗಿ ನಾನು ಮೃದು ಧೋರಣೆ ತೋರುವುದಿಲ್ಲ: ಎಚ್. ಡಿ. ಕುಮಾರಸ್ವಾಮಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ಕಲಬುರಗಿ:

ಕೊವಿಡ್ ಸಂದರ್ಭದಲ್ಲಿ ನಾನು ಸರ್ಕಾರಕ್ಕೆ ಸಹಕಾರ ಕೊಡೊದು ನನ್ನ ಜವಬ್ದಾರಿ, ಜನರು ಸಂಕಷ್ಟದಲ್ಲಿರೋ ಕಾರಣ ಆಡಳಿತ ಪಕ್ಷಕ್ಕೆ ಸಹಕಾರ ಕೊಡಲೇಬೇಕು ಇದನ್ನ ಬಿಟ್ಟು ನಾನು ಬಿಜೆಪಿ ಬಗ್ಗೆ ಯಾವತ್ತು ಸಾಫ್ಟ್ ಕಾರ್ನರ್ (ಮೃದು ಧೋರಣೆ) ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮದವರ ಜೊತೆಗೆ ಮಾತಮಾಡಿದ ಅವರು, ಬಿಜೆಪಿ ಬಗ್ಗೆ ಕುಮಾರಸ್ವಾಮಿ ಸಾಫ್ಟ್ ಕಾರ್ನರ್ ಎಂಬ ಕಾಂಗ್ರೆಸ್ ಆರೋಪ ವಿಚಾರ ಪ್ರತಿಕ್ರಿಯೆ ನೀಡಿದರು. ಕೊವಿಡ್ ಸಂದರ್ಭದಲ್ಲಿ ನಾನು ಸರ್ಕಾರಕ್ಕೆ ಸಹಕಾರ ನೀಡಿದೆನೆ. ಜನರು ಸಂಕಷ್ಟದಲ್ಲಿರುವ ಕಾರಣ ಆಡಳಿತ ಪಕ್ಷಕ್ಕೆ ಸಹಕಾರ ಕೊಡಲೇಬೇಕು ನನ್ನ ಜವಾಬ್ದಾರಿಯಾಗಿತ್ತು. ಇದನ್ನ ಬಿಟ್ಟು ನಾನು ಬಿಜೆಪಿ ಬಗ್ಗೆ ಯಾವತ್ತು ಸಾಫ್ಟ್ ಕಾರ್ನರ್ ಆಗುವುದಿಲ್ಲ ಎಂದರು.

ಮೈಸೂರು ಪಾಲಿಕೆಯಲ್ಲಿ ನಾವು ಅವಕಾಶವಾದಿ ರಾಜಕಾರಣ ನಡೆಸಿಲ್ಲ. ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷ ಮೈತ್ರಿಗೆ ಸಿದ್ದವಿರಲಿಲ್ಲ‌‌. ನಮ್ಮ ಅಭ್ಯರ್ಥಿಯನ್ನ ಕಣಕ್ಕಿಳಿಸಿ ಬೆಂಬಲಿಸಿದ್ದೇವೆ ಅಷ್ಟೇ ಎಂದು ಸ್ಪಷ್ಟಿಕರಣ ನೀಡಿದರು.

‘ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ‌’

ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ 42 ಅಭ್ಯರ್ಥಿಗಳು ಜೆಡಿಎಸ್ ಪಕ್ಷದಿಂದ ಕಣದಲ್ಲಿದ್ದಾರೆ. ಕಾಂಗ್ರೆಸ್ ಬಿಜೆಪಿ ಪಕ್ಷಗಳ ಭರಾಟೆಯಾದ ಪ್ರಚಾರದಲ್ಲಿ ತೊಡಗಿವೆ. ಈ ಚುನಾವಣೆ ಮುಖಾಂತರ ಕಲಬುರಗಿಯಲ್ಲಿ ಜೆಡಿಎಸ್ ಅಧಿಕಾರ ನಡೆಸುತ್ತೆ. ನಗರದಲ್ಲಿ ಸಾಕಷ್ಟು ಮೂಲಭೂತ ಸಮಸ್ಯೆಗಳು ಜನರನ್ನ ಕಾಡುತ್ತಿವೆ. ನಾನು ಸಿಎಂ ಆಗಿದ್ದಾಗ ಉತ್ತರ ಕರ್ನಾಟಕದ ನೀರಿನ ಸಮಸ್ಯೆಯನ್ನ ಬಗೆಹರಿಸಿದ್ದೇನೆ. ಪ್ರವಾಹದಿಂದ ತತ್ತರಿಸಿದ ಜನರಿಗೆ ಇದುವರೆಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಕಾಂಗ್ರೆಸ್‌ನವರು ಪ್ರತಿದಿನ ಭ್ರಷ್ಟಾಚಾರದ ಬಗ್ಗೆನೇ ಚರ್ಚಿಸುತ್ತಾರೆ. ಆದರೆ ಅವರ ಅಧಿಕಾರದ ಅವಧಿಯಲ್ಲೆ ಸಾಕಷ್ಟು ಭ್ರಷ್ಟಾಚಾರ ಆಗಿದೆ. ಪಾಲಿಕೆ ಚುನಾವಣೆಯಲ್ಲಿ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ತರುತ್ತೇವೆ ಎಂದು ಹೆಚ್ಡಿಕೆ ಹೇಳಿದ್ದಾರೆ.

‘ನಾನು ಸಿಎಂ ಆಗಿದ್ದಾಗ ಮಾತ್ರ ರೈತರಿಗೆ ಉತ್ತೇಜನ ಸಿಕ್ಕಿದ್ದು’

ಇದೆ ವೇಳೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಎಂದು ಬಿಜೆಪಿ ಬರೀ ಮರುನಾಮಕರಣ ಮಾಡಿದೆ ಅಷ್ಟೇ. ಕೊವಿಡ್ ಅನಾಹುತಗಳು ಹೆಚ್ಚು ನಡೆದಿದ್ದು ಕಲಬುರಗಿಯಲ್ಲೆ. ಈ ಸರ್ಕಾರದಲ್ಲಿ ಯಾವುದೇ ಪೂರ್ವಾಲೋಚನೆಗಳು ಇಲ್ಲ. ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಕೃಷಿ ಮತ್ತು ತೋಟಗಾರಿಕೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ವತಿಯಿಂದ ಒಂದು ಸಂಸ್ಥೆ ಆರಂಭಿಸಬೇಕೆಂದು ಹೇಳಿದ್ದಾರೆ. ರೈತರು ಬೆಳೆದ ಬೆಳೆಗಳನ್ನ ರಫ್ತು ಮಾಡಲು ಸಂಸ್ಥೆಯೊಂದನ್ನ ಆರಂಭಿಸಬೇಕೆಂದು ಮನವಿ ಮಾಡಿದ್ದಾರೆ. ರೈತರಿಗೆ ಹೆಚ್ಚು ಉತ್ತೇಜನ ಸಿಕ್ಕಿದ್ದು ನಾನು ಸಿಎಂ ಆಗಿದ್ದಾಗ ಮಾತ್ತ ಎಂದಿದ್ದಾರೆ.

‘ಜಿಡಿಎಸ್ ಕಾರ್ಯಕರ್ತರನ್ನು ಅವಮಾನಿಸುವುದಿಲ್ಲ’

ಕಾರ್ಯಕರ್ತರು ಸರಿಯಿಲ್ಲ ಎಂಬ ಮಾತನ್ನ ಮಾಧ್ಯಮಗಳು ತಿರುಚಿವೆ‌. ಯಾವುದೋ ಸಂದರ್ಭಕ್ಕೆ ಅನುಗುಣವಾಗಿ ಹೇಳಿದ್ದೇನೆ. ಯಾವುದೋ ಒಂದು ಮಾಧ್ಯಮದಲ್ಲಿ ನನ್ನ ಹೇಳಿಕೆಯನ್ನು ತಿರುಚಿ ದೊಡ್ಡಮಟ್ಟದಲ್ಲಿ ತೋರಿಸಿದ್ದಾರೆ. ನಾನು ನಮ್ಮ ಕಾರ್ಯಕರ್ತರಿಗೆ ಅವಮಾನ ಮಾಡಿಲ್ಲ. ದುಡಿಯುವ ಕಾರ್ಯಕರ್ತರಿಗೆ ಗುರುತಿಸುವ ಕೆಲಸ ಜೆಡಿಎಸ್‌ನಲ್ಲಿ ಮಾತ್ರವಿದೆ ಎಂದ ಅವರು, ಜಿ ಟಿ ದೇವೆಗೌಡ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ. ನಾನು ಯಾರನ್ನು ಹೋಗಿ ಅಂತಾ ದುರಹಂಕಾರದಿಂದ ಹೇಳಲ್ಲ ಎಂದರು.

ಮೈಸೂರು ಗ್ಯಾಂಗ್‌ರೇಪ್ ಪ್ರಕರಣ:

ಸರ್ಕಾರದ ವೈಫಲ್ಯವೇ ಮೈಸೂರು ಗ್ಯಾಂಗ್ ರೇಪ್‌ಗೆ ಕಾರಣವಾಗಿದೆ. ಈ ಹಿಂದೆ ಕೂಡ ಇಂತಹ ಅನೇಕ ಪ್ರಕರಣ ನಡೆದಿವೆ ಅಂತಾ ಆರೋಪಿಗಳೇ ಒಪ್ಪಿಕೊಂಡಿದ್ದಾರೆ. ಅದೆಷ್ಟು ಅಮಾಯಕ ಮಹಿಳೆಯ ಕಿರಾತಕರಿಗೆ ಬಲಿಯಾಗಿದ್ದಾರೋ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss