ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊದಲ ಬಾರಿ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸಿರೋ ‘ಸಿಕಂದರ್’ ಚಿತ್ರ ಇದೇ ಮಾ.30ರಂದು ರಿಲೀಸ್ ಸಜ್ಜಾಗಿದೆ. ಚಿತ್ರದ ಪ್ರಚಾರ ಕಾರ್ಯದ ವೇಳೆ, ಹಲವು ವಿಚಾರಗಳ ಬಗ್ಗೆ ಸಲ್ಮಾನ್ ಮಾತನಾಡಿದ್ದಾರೆ.
ಚಿತ್ರದ ಪ್ರಚಾರ ಕಾರ್ಯದಲ್ಲಿ ಸಲ್ಮಾನ್‌ಗೆ ನಿಮ್ಮ ಚಿತ್ರಗಳು ರಿಲೀಸ್ ಆದಾಗ ಒಂದಲ್ಲಾ ಒಂದು ವಿವಾದಗಳು ಟ್ರೆಂಡ್ ಆಗುತ್ತಲೇ ಇರುತ್ತದೆ ಎಂದು ಕೇಳಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ನಟ, ನನಗೆ ವಿವಾದಗಳ ಅಗತ್ಯವಿಲ್ಲ. ಆದರೆ ನಾನು ಹಲವಾರು ವಿವಾದಗಳನ್ನು ಎದುರಿಸಿದ್ದೇನೆ. ವಿವಾದಗಳಿಂದ ಸಿನಿಮಾ ಹಿಟ್ ಆಗುತ್ತೆ ಎಂದು ನಾನು ನಿರೀಕ್ಷೆ ಮಾಡಲ್ಲ ಎಂದಿದ್ದಾರೆ.
ಭ್ರಷ್ಟ ರಾಜಕೀಯದ ವಿರುದ್ಧ ಹೋರಾಡುವ ವ್ಯಕ್ತಿಯಾಗಿ ಸಲ್ಮಾನ್ ನಟಿಸಿದ್ದರೆ, ಜೊತೆಯಾಗಿ ರಶ್ಮಿಕಾ ಮಂದಣ್ಣ, ಕಾಜಲ್, ‘ಬಾಹುಬಲಿ’ ಖ್ಯಾತಿಯ ಕಟ್ಟಪ್ಪ, ಕನ್ನಡದ ನಟ ಕಿಶೋರ್ ಸೇರಿದಂತೆ ಅನೇಕರು ನಟಿಸಿದ್ದಾರೆ.