ನನ್ನ ಮತಕ್ಷೇತ್ರದಲ್ಲಿ ಮೂರು ದೇವಸ್ಥಾನ ಒಡೆದು ಹಾಕಿದ್ದೇನೆ- ಡಿಎಂಕೆ ಸಂಸದನ ಜಂಬದ ಮಾತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

“ನಾನು 100 ವರ್ಷಗಳಿಗೂ ಹಳೆಯದಾದ ದೇವಸ್ಥಾನವನ್ನು ಒಡೆದುಹಾಕಿದ್ದೇನೆ…ನನ್ನ ಮತಕ್ಷೇತ್ರದಲ್ಲಿ ಲಕ್ಷ್ಮೀ, ಸರಸ್ವತಿ, ಪಾರ್ವತಿ ಈ ದೇವತೆಗಳಿಗೆ ಸೇರಿದ್ದ ಮೂರು ದೇವಸ್ಥಾನವನ್ನು ಒಡೆದುಹಾಕಿದ್ದೇನೆ. ” ಹೀಗಂತ ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಗಂ) ಸಂಸದನೊಬ್ಬ ರಾಜಾರೋಷವಾಗಿ ಜಂಭದಿಂದ ಹೇಳಿಕೊಂಡಿದ್ದಾನೆ.

ದೇವಸ್ಥಾನಗಳ ನಗರ ಅಂತಲೇ ಕರೆಸಿಕೊಳ್ಳುವ ತಮಿಳುನಾಡಿನ ಮದುರೈನಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷವು ರಾಮಸೇತುವನ್ನು ಒಡೆಯುವ ಯೋಜನೆಯಾದ ಸೇತುಸಮುದ್ರಂ ಯೋಜನೆಗೆ ಬೆಂಬಲ ನೀಡುವ ಸಲುವಾಗಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಪೆರಂಬದೂರು ಡಿಎಂಕೆ ಸಂಸದ ಟಿಆರ್‌ ಬಾಲು ದೇವಸ್ಥಾನವನ್ನು ಕೆಡವಿ ಸಾಧನೆ ಮಾಡಿದ್ದೇನೆ ಎಂಬಂತೆ ಹೇಳಿಕೊಂಡಿದದ್ದಾರೆ.

“ನನ್ನ ಕ್ಷೇತ್ರದಲ್ಲಿ ನಾನು ದಕ್ಷಿಣ ಟ್ರಂಕ್‌ ರೋಡ್‌ ಗೆ ಅಡ್ಡವಾಗಿದ್ದ ಲಕ್ಷ್ಮೀ ದೇವಸ್ತಾನ, ಸರಸ್ವತಿ ದೇವಸ್ತಾನ, ಹಾಗು ಪಾರ್ವತಿ ದೇವಸ್ತಾನಗಳನ್ನು ಒಡೆದುಹಾಕಿದ್ದೇನೆ. ಇದರಿಂದ ನನಗೆ ವೋಟ್‌ ಬರೋಲ್ಲ ಅಂತ ಗೊತ್ತಿದೆ. ಆದರೆ ವೋಟ್‌ ಗಳನ್ನು ಹೇಗೆ ಪಡೆಯ ಬೇಕೆಂಬುದು ನನಗೆ ಗೊತ್ತಿದೆ. ಇದನ್ನು ಕೆಡವಬೇಡಿ ನಿಮಗೆ ಮತಗಳು ಬರೋದಿಲ್ಲ ಅಂತ ನನ್ನ ಆಪ್ತರು ಎಚ್ಚರಿಸಿದ್ರು. ಆದರೆ ನಾನದನ್ನು ಕೆಡವಿಸಿದೆ” ಎಂದು ಏನೋ ಸಾಧನೆ ಮಾಡಿ ಬಿಟ್ಟಂತೆ ಟಿಆರ್‌ ಬಾಲು ಹೇಳಿಕೊಂಡಿದ್ದಾರೆ. ಜನರಿಗೆ ಇದಕ್ಕಿಂತ ದೊಡ್ಡ ದೇವಸ್ತಾನ ಕಟ್ಟಿಕೊಡುವ ಭರವಸೆ ನೀಡಿ ಇದನ್ನು ಒಡೆದುಹಾಕಲಾಗಿದೆ ಎಂದು ಸಮಜಾಯಿಷಿ ಕೊಟ್ಟುಕೊಂಡಿದ್ದಾರೆ. ಡಿಎಂಕೆ ಸಂಸದ ಈ ರೀತಿ ಹೇಳಿಕಗಳನ್ನು ನೀಡುವಾಗ ಕಾಂಗ್ರೆಸ್, ಡಿಎಂಕೆ, ವಿಸಿಕೆಯ ಪ್ರಮುಖರೆಲ್ಲ ವೇದಿಕೆಯ ಮೇಲೆಯೇ ಇದ್ದರು.

ಸಂಸದನ ಈ ಮಾತುಗಳೀಗ ಸೋಷಿಯಲ್‌ ಮೀಡಿಯಾಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಲವರು ಸಂಸದನ ಈ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ʼದೇವಸ್ತಾನವನ್ನು ಒಡೆಯೋದು ಸಾಧನೆಯಾ?ʼ ಅಂತೆಲ್ಲ ಟೀಕೆಗಳು ವ್ಯಕ್ತವಾಗಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!