Thursday, July 7, 2022

Latest Posts

ಮನೆ ಬಿಟ್ಟು ಬಂದಿದ್ದೇನೆ ಬಾಡಿಗೆ ಮನೆ ಕೊಡಿಸಿ ಎಂದ ಅಪ್ರಾಪ್ತೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ವರದಿ, ಮುಂಡಗೋಡ:

ನನಗೊಂದು ಬಾಡಿಕೆ ರೂಂ ಕೊಡಿಸಿ, ನಾನು ಅಲ್ಲಿಯೇ ಇದ್ದು ಜೀವನ ಮಾಡುತ್ತೇನೆ, ಮನೆಯಲ್ಲಿ ಹೊಡೆಯುತ್ತಾರೆ, ಬಡಿಯುತ್ತಾರೆ ಎಂದು ಹೇಳಿ ಬ್ಯಾಗ್ ನಲ್ಲಿ ಬಟ್ಟೆ ತುಂಬಿಕೊಂಡು ಬಂದಿದ್ದ ಅಪ್ರಾಪ್ತೆ ಒಬ್ಬಳು, ನೆರೆದವರಿಗೆ ಮನವಿ ಮಾಡಿರುವ ಘಟನೆ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.
ಪಟ್ಟಣದ ಮಾರ್ಕೆಟಿಂಗ್ ಸೊಸೈಟಿಯ ಆವರಣದಲ್ಲಿ ಕೈಯಲ್ಲಿ ಚೀಲ ಹಿಡಿದುಕೊಂಡು ಬಂದಿದ್ದ, ಅಪ್ರಾಪ್ತೆಯೊಬ್ಬಳು, ಅಲ್ಲಿದ್ದ ಜನರು ಹಾಗೂ ಸೊಸೈಟಿ ಸಿಬ್ಬಂದಿಗೆ, ನಾನು ಮನೆ ಬಿಟ್ಟು ಬಂದಿದ್ದೇನೆ. ಮನೆಯಲ್ಲಿ ತೊಂದರೆ ಕೊಡುತ್ತಾರೆ. ಅದಕ್ಕಾಗಿ ಪ್ರತ್ಯೇಕ ರೂಂ ಮಾಡಿ ಜೀವನ ಮಾಡುತ್ತೇನೆ. ಬಾಡಿಗೆ ಮನೆ ಕೊಡಿಸಿ ಎಂದು ಹೇಳಿದ್ದಾಳೆ.
ಇದನ್ನು ಕೆಳಿದ ಜನರಿಗೆ ಶಾಕ್ ಆಗಿದೆ. ಸಣ್ಣ ವಯಸ್ಸಿನ ಹುಡುಗಿ, ಯಾವ ಊರಿನವಳು ಇರಬಹುದು? ಎಂದು ವಿಚಾರಣೆಗೆ ಮುಂದಾಗಿದ್ದಾರೆ. ಆದರೆ ಜನರ ಯಾವ ಪ್ರಶ್ನೆಗಳಿಗೂ ಆಕೆ ಉತ್ತರ ನೀಡಿಲ್ಲ. ಬದಲಾಗಿ ತನ್ನ ಹೆಸರೊಂದನ್ನು ಮಾತ್ರ ಹೇಳಿದ್ದಾಳೆ. ಕೊನೆಗೆ ಪಿ.ಎಸ್.ಐ ಬಸವರಾಜ ಮಬನೂರ, ಪ್ರೊಬೆಷನರಿ ಪಿ.ಎಸ್.ಐ ಕಸ್ತೂರಿ ಕುಕನೂರ ಹಾಗೂ ಸಿಬ್ಬಂದಿ ಬಂದು, ಬಾಲಕಿಯನ್ನು ವಿಚಾರಿಸಲು ಕರೆದುಕೊಂಡು ಹೋದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆ ಬಿಟ್ಟು ಪಟ್ಟಣಕ್ಕೆ ಬಂದ ಅಪ್ರಾಪ್ತೆಯನ್ನು ಮನವೊಲಿಸಿ ಬುದ್ಧಿವಾದ ಹೇಳಿ ಪೋಷಕರ ಜೊತೆ ಕಳುಹಿಸಿದರು.
ಸಿಪಿಐ ಪ್ರಭುಗೌಡ ಡಿ.ಕೆ ಬಾಲಕಿಯನ್ನು ಸಮಾಧಾನದಿಂದ ವಿಚಾರಿಸದ ನಂತರ ತಾನು ಇಂದೂರ ಗ್ರಾಮ ಪಂಚಾಯಿತಿಯವಳು ತಂದೆ-ತಾಯಿ ಇರುವ ಬಗ್ಗೆ ಹಾಗೂ ತಾನು ಏಕೆ ಮನೆ ಬಿಟ್ಟು ಬಂದೆ ಎಂಬುವದರ ಬಗ್ಗೆ ತಿಳಿಸಿದ್ದಾಳೆ. ತದನಂತರ ಈಕೆಯ ಪೋಷಕರನ್ನು ಕರೆದು ಬಾಲಕಿಗೆ ಮತ್ತು ಪೋಷಕರಿಗೆ ಬುದ್ಧಿವಾದ ಹೇಳಿ ಹೆತ್ತವರ ಜೊತೆ ಕಳುಹಿಸುವ ಮೂಲಕ ಪ್ರಕರಣ ಸುಖ್ಯಾಂತ ಕಂಡಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss