ಪ್ರಧಾನಿ ಹುದ್ದೆಗೆ ನಾನು ರಾಜೀನಾಮೆ ನೀಡಲ್ಲ, ಕೊನೆಯ ಕ್ಷಣದ ವರೆಗೂ ಹೋರಾಡುತ್ತೇನೆ: ಇಮ್ರಾನ್ ಖಾನ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೇಶವನ್ನುದ್ದೇಶಿಸಿ ಪಾಕ್​ ಪ್ರಧಾನಿ ಇಮ್ರಾನ್ ಖಾನ್ ಮಾತನಾಡಿದ್ದಾರೆ. ಇಂದು ಅಧಿವೇಶನದಲ್ಲಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಲಾಗಿದ್ದು, ಇದರ ಬೆನ್ನಲ್ಲೇ ಇಮ್ರಾನ್ ಖಾನ್ ದೇಶವನ್ನುದ್ದೇಶಿಸಿ ಮಾತನಾಡಿದ್ದು, ಪ್ರಧಾನಿ ಹುದ್ದೆಗೆ ನಾನು ರಾಜೀನಾಮೆ ನೀಡಲ್ಲ, ಕೊನೆಯ ಕ್ಷಣದ ವರೆಗೂ ಹೋರಾಡುತ್ತೇನೆ. ಅವಿಶ್ವಾಸ ನಿರ್ಣಯವನ್ನು ಎದುರಿಸುತ್ತೇನೆ ಎಂದು ಹೇಳಿದ್ದಾರೆ.
ನನ್ನ ಮನದ ಮಾತು ಪಾಕಿಸ್ತಾನದ ಜನತೆ ಮುಂದಿಡುವ ಉದ್ದೇಶದಿಂದ ಭಾಷಣ ಮಾಡುತ್ತಿದ್ದೇನೆ. . ಇಲ್ಲಿನ ಜನರ ಸೇವೆ ಮಾಡುವ ಕಾರಣಕ್ಕಾಗಿ ನಾನು ರಾಜಕಾರಣಕ್ಕೆ ಬಂದಿದ್ದು, ಅನೇಕ ರೀತಿಯ ಏರಿಳಿತ ಕಂಡಿದ್ದೇನೆ ಎಂದರು.
ಇತರೆ ರಾಷ್ಟ್ರಗಳ ಎದುರು ನಾವು ಇರುವೆಗಳಂತೆ ಸಾಗುತ್ತಿದ್ದೇವೆ.ಭಾರತವನ್ನ ನಾವು ಯಾವುದೇ ವಿಷಯದಲ್ಲೂ ವಿರೋಧ ಮಾಡಿಲ್ಲ. 9/11 ದಾಳಿಯಲ್ಲಿ ಪಾಕಿಸ್ತಾನದ ನಾಗರಿಕರು ಭಾಗಿಯಾಗಿರಲಿಲ್ಲ. ಹಳೆ ಜಿಹಾದಿ ಸಂಘಟನೆಗಳು ಪಾಕ್​ ವಿರುದ್ಧ ಒಂದಾಗಿ ಈ ಕೆಲಸ ಮಾಡ್ತಿವೆ. ಕಾಶ್ಮೀರ್​ ವಿಚಾರದಲ್ಲಿ ನನಗೆ ಭಾರತದೊಂದಿಗೆ ಯಾವುದೇ ರೀತಿಯ ಭಿನ್ನಾಬಿಪ್ರಾಯವಿಲ್ಲ. ಆರ್ಟಿಕಲ್ 370 ರದ್ದುಗೊಳಿಸುವ ಮುನ್ನ ಅದರ ವಿರುದ್ಧ ನಾನು ಮಾತನಾಡಿಲ್ಲ ಎಂದಿದ್ದಾರೆ.
ದೇವರು ನನಗೆ ಎಲ್ಲವನ್ನೂ ಕೊಟ್ಟಿರುವುದು ನನ್ನ ಅದೃಷ್ಟ. ನನಗೆ ಏನೂ ಅಗತ್ಯವಿಲ್ಲ . ಪಾಕಿಸ್ತಾನ ನನಗಿಂತಲೂ ಕೇವಲ 5 ವರ್ಷ ಹಳೆಯದು. ಸ್ವಾತಂತ್ರ್ಯದ ನಂತರ ಹುಟ್ಟಿರುವ ದೇಶದ 1ನೇ ತಲೆಮಾರಿನವನು ನಾನು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!