ಹೊಸ ದಿಗಂತ ವರದಿ, ವಿಜಯಪುರ:
ಚಿಂಚೊಳ್ಳಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ಸಮಸ್ಯೆ ನನಗೆ ಸಂಬಂಧ ಇಲ್ಲ ಎಂದು ಜವಳಿ, ಸಕ್ಕರೆ, ಎಪಿಎಂಸಿ ಖಾತೆ ಸಚಿವ ಶಿವಾನಂದ ಪಾಟೀಲ್ ಹೇಳಿದರು.
ನಗರದಲ್ಲಿ ಸುದ್ದಿಗೋಯಲ್ಲಿ ಮಾತನಾಡಿದ ಅವರು, ಕಾರ್ಖಾನೆ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ ನೋಡಿಕೊಳ್ಳುತ್ತದೆ. ಅದಕ್ಕೂ ನನಗೂ ಸಂಬಂಧವಿಲ್ಲ ಎಂದರು.
ಇನ್ನೂ ರಾಜ್ಯಪಾಲರ ನಡೆ ಖಂಡಿಸಿ ಇಂದು ರಾಜಭವನ ಚಲೋಗೆ ನಾನೂ ಹಾಜರಾಗಬೇಕಿತ್ತು. ಡಿಸಿಸಿ ಬ್ಯಾಂಕ್‌ನ ಇಂದು ಜಿಬಿ ಇದೆ. ಆರ್ ಬಿ ಐ ನಿಯಮಗಳ ಪ್ರಕಾರ ಜಿಬಿ ನಡೆಸಬೇಕಿದೆ.
ಹಾಗಾಗಿ ನಾನು ಅನುಮತಿ ಮೇರೆಗೆ ರಾಜಭನ ಚಲೋದಲ್ಲಿ ಭಾಗಿಯಾಗಿಲ್ಲ ಎಂದರು.