Sunday, June 26, 2022

Latest Posts

ಎಂತೆಂಥವರು ನನ್ನ ವಿರುದ್ಧ ರಣಕಹಳೆ ಊದಿದ್ದರೂ 30 ಸಾವಿರ ಮತಗಳಿಂದ ಗೆದ್ದು ಬಂದಿದ್ದೇನೆ: ಎಂ.ಬಿ. ಪಾಟೀಲ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ವಿಜಯಪುರ:

ಕಳೆದ ಚುನಾವಣೆಯಲ್ಲಿ ಎಂತೆಂಥವರು ನನ್ನ ವಿರುದ್ಧ ಬಬಲೇಶ್ವರದಲ್ಲಿ ರಣ ಕಹಳೆ ಊದಿದ್ದರೂ, 30 ಸಾವಿರ ಮತಗಳಿಂದ ಗೆದ್ದಿದ್ದೇನೆ. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ನನ್ನ ವಿರುದ್ಧ ರಣ ಕಹಳೆ ಊದುತ್ತೀನಿ ಎಂದಿದ್ದಾರೆ. ಮೊದಲು ಇಂಡಿಯಲ್ಲಿ ಸರಿಯಾಗಿ ಬ್ಯಾಂಡ್ ಬಾಜ್ ಬಾರಿಸುವುದು ಕಲಿಯಲಿ ಎಂದು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ್ ಸ್ವಪಕ್ಷೀಯ ಇಂಡಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಚುನಾವಣೆ ವೇಳೆ ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮೀತ ಶಾ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನನ್ನ ವಿರುದ್ಧ ರಣ ಕಹಳೆ ಊದಿದರೂ, ಅಪಾರ ಮತಗಳ ಅಂತರದಿಂದ ಗೆದ್ದಿರುವೆ ಎಂದರು‌.

ನೀರಾವರಿ ವಿಚಾರದಲ್ಲಿ ನಡೆದಾಡುವ ದೇವರು, ಸಿದ್ಧೇಶ್ವರ ಶ್ರೀಗಳು ನನಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಅದಕ್ಕಿಂತ ದೊಡ್ಡದು ಯಾವುದೂ ನನಗೆ ಬೇಕಿಲ್ಲ ಎಂದರು. 16 ಕೆರೆ ತುಂಬುವ ಕುರಿತು ಜಲ ಸಂಪನ್ಮೂಲ ಇಲಾಖೆ ಯೋಜನೆಯೇ ಇರಲಿಲ್ಲ. ಅದನ್ನು ನಾನು ಮಾಡಿದ್ದೇನೆ. ಇವರಿಗೆ ಹೊಟ್ಟೆ ಉರಿಯಿಂದ ಸಹಿಸಿಕೊಳ್ಳಲಾಗದೇ ಈ ರೀತಿಯ ಹೇಳಿಕೆ ಕೊಟ್ಟಿದ್ದಾರೆ ಎಂದರು.

ಬಿ ಎಲ್ ಡಿ ಇ ಬಗ್ಗೆ ನಾನು ಮಾತನಾಡುತ್ತೀನಿ ಎಂದು ಇಂಡಿ ಶಾಸಕ ಹೇಳಿದ್ದಾರೆ. ನನ್ನ ತಂದೆ ಬಿ ಎಲ್ ಡಿ ಇ ಸಂಸ್ಥೆ ಅಭಿವೃದ್ಧಿಗೆ ಕೆಲಸ ಮಾಡಿದ್ದಾರೆ. ಹೊಲ ಒತ್ತೆ ಇಟ್ಟು ಸಂಸ್ಥೆಯ ಅಭಿವೃದ್ಧಿಗೆ ಕೆಲಸ ಮಾಡಿದ್ದಾರೆ. ಇಂಜಿನಿಯರಿಂಗ್ ಕಾಲೇಜು ಪ್ರಾರಂಭ ಮಾಡಲು ಎರಡು ಕೋಟಿ ಸಾಂಗಲಿ ಬ್ಯಾಂಕ್ ನಲ್ಲಿ ಸಾಲ ಪಡೆದು ಪ್ರಾರಂಭಿಸಿದರು. ಮೆಡಿಕಲ್ ಕಾಲೇಜು ಪ್ರಾರಂಭಿಸಲು ವೈಶ್ಯಾ ಬ್ಯಾಂಕ್ ನಲ್ಲಿ 5 ಕೋಟಿ ಸಾಲ ಪಡೆದು ಪ್ರಾರಂಭಿಸಿದರು. ಇದೆಲ್ಲದಕ್ಕೂ ಹೊಲವನ್ನು ಅಡವಟ್ಟು ಸಾಲ ಪಡೆದರು ಎಂದರು.

ಲಿಂಗಾಯತ್ ಪ್ರತ್ಯೇಕ ಧರ್ಮದ ಹೋರಾಟದಿಂದ ಕಾಂಗ್ರೆಸ್ ಹಿನ್ನೆಡೆ ಆಗಿದೆ ಎಂದು ಶಾಸಕ ಯಶವಂತರಾಗೌಡ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದ ವಿಚಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಹಿನ್ನೆಡೆಯಾಗಿಲ್ಲ. ಉತ್ತರ ಕುಮಾರ ಜೋರಾಗಿ ಸ್ಟೈಲ್ ನಲ್ಲಿ ಮಾತನಾಡುತ್ತಿದ್ದಾರೆ. ಈ ಪುಣ್ಯಾತ್ಮನಿಗೆ ಇಂಡಿಗೆ ಜಿಪಂ ಟಿಕೆಟ್ ಕೊಡಲು ತಯಾರಿರಲಿಲ್ಲ. ನಾನು‌ ಆ ಟೈಮ್ ನಲ್ಲಿ ಟಿಕೆಟ್ ಕೊಡಿಸಿದೆ. 31 ಜಿಪಂ ಸದಸ್ಯರಿಗೆ ಹೆದರಿಸಿ ಇವರ ಪರವಾಗಿ ಮತ ಹಾಕುವಂತೆ ಮಾಡಿ ಜಿಪಂ ಅಧ್ಯಕ್ಷ ಮಾಡಿದ್ದೇನೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss