ಈ ಸಿನಿಮಾಗಾಗಿ ತಮ್ಮೆಲ್ಲ ಆಸ್ತಿಯನ್ನು ಅಡ ಇಟ್ಟಿದ್ದೇನೆ: ನಟಿ ಕಂಗನಾ ರಣಾವತ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುರಿತ ‘ಎಮರ್ಜೆನ್ಸಿ’ ಸಿನಿಮಾ ಬಗ್ಗೆ ನಟಿ ಕಂಗನಾ ರಣಾವತ್ ಮಾತನಾಡಿದ್ದು, ಬಹುತೇಕ ಚಿತ್ರೀಕರಣ ಮುಗಿದಿದ್ದು, ಈ ಸಿನಿಮಾಗಾಗಿ ತಮ್ಮೆಲ್ಲ ಆಸ್ತಿಯನ್ನು ಅಡ ಇಟ್ಟಿರುವುದಾಗಿ ಬರೆದುಕೊಂಡಿದ್ದಾರೆ.

ಎಮರ್ಜೆನ್ಸಿ ಸಿನಿಮಾ ಕಂಗನಾ ಪಾಲಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದ್ದು, ಈ ಸಿನಿಮಾದಲ್ಲಿ ಕೇವಲ ನಟಿಯಾಗಿ ಮಾತ್ರವಲ್ಲ, ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿಯೂ ಅವರು ಕೆಲಸ ಮಾಡಿದ್ದಾರೆ. ಹಾಗಾಗಿ ಜವಾಬ್ದಾರಿ ಜಾಸ್ತಿ ಮಾಡಿಕೊಂಡಿದ್ದಾರೆ. ತಮ್ಮ ಆಸ್ತಿಯನ್ನು ಅಡವಿಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಈ ಸಿನಿಮಾದಲ್ಲಿ ಅವರು ಇಂದಿರಾ ಗಾಂಧಿಯ ಪಾತ್ರವನ್ನು ನಿರ್ವಹಿಸಿದ್ದು, ಕೆಲ ಫೋಟೋಗಳನ್ನೂ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಡೆಂಗ್ಯೂ ಜ್ವರದಿಂದ ತಾವು ಬಳಲಿದ್ದರ ಕುರಿತಾಗಿಯೂ ಅವರು ಹೇಳಿಕೊಂಡಿದ್ದಾರೆ. ಕಡಿಮೆ ರಕ್ತ ಕಣಗಳ ನಡುವೆಯೂ ತಾವು ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರ ನೋವನ್ನು ಅವರು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!