ನಿಮ್ಮನ್ನು ನನಗೆ ಗೊತ್ತು, ನೀವು ತುಂಬಾ ಫೇಮಸ್: ಕೇಂದ್ರ ಸಚಿವ ಜೈಶಂಕರ್‌ಗೆ ಇಂಡೋನೇಷ್ಯಾ ಅಧ್ಯಕ್ಷರ ಮೆಚ್ಚುಗೆಯ ಮಾತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಸೇರಿದಂತೆ ಭಾರತದ ಅಧಿಕಾರಿಗಳ ತಂಡ ಪಾಲ್ಗೊಂಡಿದೆ. ಬ್ರಿಟನ್ ಸೇರಿದಂತೆ ಹಲವು ದೇಶಗಳ ಜೊತೆ ಭಾರತ ದ್ವಿಪಕ್ಷೀಯ ಮಾತುಕತೆ ನಡೆಸಿದೆ.

ಈ ಪೈಕಿ ಇಂಡೋನೇಷಿಯಾ ಜೊತೆಗಿನ ದ್ವಿಪಕ್ಷೀಯ ಮಾತುಕತೆ ಆರಂಭಕ್ಕೂ ಮುನ್ನ ಪ್ರಧಾನಿ ಮೋದಿ ನೇತೃತ್ವದ ತಂಡವನ್ನು ಇಂಡೋನೇಷಿಯಾ ಅಧ್ಯಕರು ಸ್ವಾಗತಿಸಿದ್ದರು. ಈ ವೇಳೆ ಸಚಿವ ಎಸ್ ಜೈಶಂಕರ್ ನೋಡುತ್ತಿದ್ದಂತೆ ನಿಮ್ಮನ್ನು ನನಗೆ ಗೊತ್ತು, ನೀವು ತುಂಬಾ ಫೇಮಸ್ ಎಂದಿದ್ದಾರೆ. ಈ ಮಾತಿನ ಬೆನ್ನಲ್ಲೇ ಪ್ರಧಾನಿ ಮೋದಿ ಹೆಮ್ಮೆಯಿಂದ ನಕ್ಕಿದ್ದಾರೆ.

ಬ್ರಿಜಿಲ್ ಜಿ20 ಶೃಂಗಸಭೆಯಲ್ಲಿ ಭಾರತ ಫಲಪ್ರದ ಮಾತುಕತೆ ನಡೆಸುತ್ತಿದೆ. ಈ ಪೈಕಿ ಇಂಡೋನೇಷಿಯಾ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿದೆ. ಮಾತುಕತೆಗೂ ಮುನ್ನ ಪ್ರಧಾನಿ ಮೋದಿ, ಜೈಶಂಕರ್ ಸೇರಿದಂತೆ ಅಧಿಕಾರಿಗಳ ತಂಡ, ಇಂಡೋನೇಷಿಯಾ ಅಧ್ಯಕ್ಷ ಪ್ರಭೋವ್ ಸುಬಿಯಾಂಟೋ ಅವರಿಗೆ ಹಸ್ತಲಾಘವ ಮಾಡಿದೆ. ಮೋದಿ ಹಸ್ತಲಾಘವ ಮಾಡಿದ ಬಳಿಕ ಜೈಶಂಕರ್ ಬಳಿ ಬಂದ ಸುಬಿಯಾಂಟೋ ಕೈಕುಲುಕಿದ್ದಾರೆ. ಈ ವೇಳೆ ಜೈಶಂಕರ್ ತಮ್ಮ ಪರಿಚಯ ಮಾಡಿಕೊಳ್ಳಲು ಮುಂದಾಗಿದ್ದಾರೆ. ನಾನು ಜೈಂಶಕರ್, ವಿದೇಶಾಂಗ ಸಚಿವ ಎಂದು ಹೇಳುತ್ತಿದ್ದಂತೆ, ನಿಮ್ಮನ್ನು ನನಗೆ ಗೊತ್ತು, ನೀವು ತುಂಬಾ ಫೇಮಸ್ ಎಂದು ಸುಬಿಯಾಂಟೋ ಹೇಳಿದ್ದಾರೆ.

https://x.com/IndiaStrikes_/status/1858917220581339417?ref_src=twsrc%5Etfw%7Ctwcamp%5Etweetembed%7Ctwterm%5E1858917220581339417%7Ctwgr%5E1c01b2883b785e1d938da9c6a0cc532c9696440a%7Ctwcon%5Es1_&ref_url=https%3A%2F%2Fstatic.asianetnews.com%2Ftwitter-iframe%2Fshow.html%3Furl%3Dhttps%3A%2F%2Ftwitter.com%2FIndiaStrikes_%2Fstatus%2F1858917220581339417%3Fref_src%3Dtwsrc5Etfw

ಸುಬಿಯಾಂಟೋ ಮಾತಿಗೆ ಮೋದಿ ನಕ್ಕಿದ್ದಾರೆ. ಇತ್ತ ಭಾರತೀಯ ಅಧಿಕಾರಿಗಳ ತಂಡ ಹಾಗೂ ಇಂಡೋನೇಷಿಯಾ ಅಧಿಕಾರಿಗಳ ತಂಡ ನಕ್ಕಿದೆ. ಈ ಘಟನೆ ಬಳಿಕ ಭಾರತ ಹಾಗೂ ಇಂಡೋನೇಷ್ಯಾ ದ್ವಿಪೀಕ್ಷಿಯ ಮಾತುಕತೆ ನಡೆಸಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!