Friday, August 19, 2022

Latest Posts

“ನಾನು ಓದುವ ಪದವಿಗೆ ಡಿಮ್ಯಾಂಡ್ ಬರುವಂತೆ ಮಾಡಬೇಕು”

ಹೊಸದಿಗಂತ ಆನ್ ಲೈನ್ ಡೆಸ್ಕ್:

ವೈದ್ಯರಾಗಲು ಈ ಹೆಣ್ಣುಮಕ್ಕಳು ಪಡೆದಿದ್ದ ಎಂಬಿಬಿಎಸ್ ಸೀಟ್ ತೊರೆದು ಮುಂದೆ ಕೃಷಿ ವಿಜ್ಞಾನ ಪದವಿ ಪಡೆದಿದ್ದಾರೆ . ಏಕೆ ಅಂತೀರಾ? ಅವರ ಕನಸು ಕೇಳಿದರೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ.
ಶಾಲೆಯಿಂದಲೂ ರ್ಯಾಂಕ್ ಪಡೆಯುತ್ತಲೇ ಬಂದಿದ್ದ ಈ ಹೆಣ್ಣುಮಕ್ಕಳಿಬ್ಬರು ವೈದ್ಯರಾಗಬೇಕೆಂಬ ಮಹದಾಸೆಯನ್ನು ಹೊಂದಿದ್ದರು. ಆದರೆ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಸಲುವಾಗಿ ತಮ್ಮ ವೈದ್ಯರಾಗುವ ಕನಸನ್ನು ಬಿಟ್ಟು ಕೃಷಿ ಕಡೆಗೆ ಒಲವು ಮೂಡಿಸಿಕೊಂಡರು.
ಅಷ್ಟೇ ಅಲ್ಲ… ಜಿ. ಮೊನಿಕಾ ಹಾಗೂ ಆಶಾ ಕಿರಣ್ ಇಬ್ಬರೂ ಕೃಷಿ ಅಧ್ಯಯನದಲ್ಲಿ ಅತಿ ಹೆಚ್ಚು ಚಿನ್ನದ ಪದಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಡ್ಯದ ಕೃಷಿ ಕಾಲೇಜಿನಲ್ಲಿ ಬಿಎಸ್ ಸಿ ಪದವಿ ಪಡೆದಿರುವ ಜಿ. ಮೋನಿಕಾ ತನ್ನ ಕಾಲೇಜಿನ ಅವಧಿಯಲ್ಲಿ ಬರೋಬ್ಬರಿ 10 ಚಿನ್ನದ ಪದಕ ಗಿಟ್ಟಿಸಿಕೊಂಡಿದ್ದಾರೆ. 2014ರಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೋನಿಕಾ ತುಮಕೂರಿಗೆ ಪ್ರಥಮ ಸ್ಥಾನ ಪಡೆದಿದ್ದರು. ಬಳಿಕ ಎಂಬಿಬಿಎಸ್ ಓದಬೇಕೆಂದು ಆಸೆ ಹೊತ್ತಿದ್ದ ಆಕೆ ಮುಂದೆ ಸಾಧಿಸಿದ್ದು ಮಾತ್ರ ಕೃಷಿ ವಿಜ್ಞಾನದ ಪದವಿ.
ಸರ್ಕಾರಗಳು ಕೃಷಿಕರಿಗೆಂದು ಮಾಡಲಾಗಿರುವ ಎಷ್ಟೋ ಯೋಜನೆಗಳ ಪರಿಚಯ ರೈತರಿಗೆ ಈವರೆಗೂ ತಿಳಿದಿಲ್ಲ. ಕೃಷಿ ವಿಚಾರವಾಗಿ ಸಂಶೋಧನೆ ಮಾಡಿದರೂ ಕೂಡ ರೈತರು ಕಷ್ಟದಲ್ಲೇ ಸಿಲುಕಿದ್ದಾರೆ. ಅಂತಹ ರೈತರಿಗೆ ಈ ಯೋಜನೆಗಳ ಪರಿಚಯ ಮಾಡಿಸುವ ಕೆಲಸ ಮಾಡಲಿಚ್ಛಿಸುತ್ತೇನೆ ಎನ್ನುತ್ತಾರೆ ಮೋನಿಕಾ.
ಕೃಷಿ ಆಯ್ಕೆ ಮಾಡಿಕೊಂಡಾಗ ಎಲ್ಲರೂ ನನ್ನನ್ನು ನೋಡಿ ನಕ್ಕರು. ಆದರೆ ಹೆಚ್ಚು ಡಿಮ್ಯಾಂಡ್ ಇರುವ ಪದವಿ ಪಡೆಯುವ ಬದಲು ನಾನು ಓದುವ ಪದವಿಗೆ ಡಿಮ್ಯಾಂಡ್ ಬರುವಂತೆ ಮಾಡಬೇಕು ಎಂಬ ಉತ್ಸಾಹ ಹೊಂದಿದ್ದರು.
ಬೆಂಗಳೂರಿನ ಆರ್ ಟಿ ನಗರದ ಆಶಾ ಕಿರಣ್ ಕೂಡ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಪದವಿಯಲ್ಲಿ 7 ಚಿನ್ನದ ಪದಕಗಳನ್ನು ಪಡೆದ ಪ್ರತಿಭಾವಂತ ಹುಡುಗಿ. ಈಕೆಯೂ ಚಾಮರಾಜನಗದಲ್ಲಿ ಎಂಬಿಬಿಎಸ್ ಪದವಿ ಪಡೆದು ವೈದ್ಯರಾಗಬೇಕಿತ್ತು. ಆದರೆ ಕೃಷಿ ವಿಜ್ಞಾನ ಆಯ್ಕೆ ಮಾಡಿ ಹೆಮ್ಮೆಯಾಗಿದ್ದಾರೆ.
ಇವರಿಬ್ಬರಿಗೂ 55ನೇ ಕೃಷಿ ವಿಜ್ಞಾನದ ಘಟಿಕೋತ್ಸವದ ಸಮಾರಂಭದಲ್ಲಿ ಪದಕಗಳನ್ನು ನೀಡಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!