ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ಐದು ವರ್ಷದವರೆಗೆ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಎಂ.ಪಿ. ಪಾಟೀಲ್ ಹೇಳಿದ್ದು, ಇದೀಗ ತಮ್ಮ ಸ್ಟೇಟ್ಮೆಂಟ್ ಬದಲಾಯಿಸಿದ್ದಾರೆ.
ವರಿಷ್ಠರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದನ್ನೇ ನಾನು ಹೇಳಿದ್ದೇನೆ, ನನ್ನ ಒಪಿನಿಯನ್ ಅಲ್ಲ. ಸಿದ್ದರಾಮಯ್ಯ ನಮ್ಮ ಸಿಎಂ ಹಾಗೂ ಡಿಕೆಶಿ ನಮ್ಮ ಡಿಸಿಎಂ ಎಂದು ಹೇಳಿದ್ದೇನೆ ಇದರಲ್ಲಿ ತಪ್ಪು ಹುಡುಕುವಂಥದ್ದು ಏನಿಲ್ಲ ಎಂದು ಹೇಳಿದ್ದಾರೆ. ಇಲ್ಲಿ ವೈಯಕ್ತಿಕವಾದ ಅಭಿಪ್ರಾಯ ಏನಿಲ್ಲ ಎಂದಿದ್ದಾರೆ.
ಇನ್ನು ಖಾತೆ ಹಂಚಿಕೆ ಬಗ್ಗೆ ಪ್ರಶ್ನೆ ಎದುರಾಗಿದ್ದು, ನನಗೆ ಯಾವ ಖಾತೆ ಕೊಟ್ಟರೂ ಬೇಸರ ಇಲ್ಲ. ಅದು ಸಿಎಂಗೆ ಬಿಟ್ಟ ವಿಚಾರ, ಅವರ ತೀರ್ಮಾನಕ್ಕೆ ಕಾಯಬೇಕಷ್ಟೇ ಎಂದಿದ್ದಾರೆ.