‘ತಮಾಷೆಗಾಗಿ ಬಾಂಬ್ ಇದೆ ಎಂದು ಸಂದೇಶ ಕಳಿಸಿದ್ದೆ’ , ಹುಸಿ ಬಾಂಬ್ ಕರೆ ಬಗ್ಗೆ ಬಾಯ್ಬಿಟ್ಟ ಬಾಲಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಾಜಿನಗರದ ಎನ್‌ಪಿಎಸ್ ಶಾಲೆಗೆ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ದು ಒಬ್ಬ ಬಾಲಕ ಎಂದು ತಿಳಿದುಬಂದಿದೆ.

ಗೂಗಲ್‌ನಲ್ಲಿ ಶಾಲೆಯ ಅಧಿಕೃತ ಇ-ಮೇಲ್ ಪಡೆದ ಬಾಲಕ ನನ್ನ ಬಳಿ ನಾಲ್ಕು ಜಿಲೆಟಿನ್ ಕಡ್ಡಿಗಳಿವೆ, ಊಟದ ಸಮಯದಲ್ಲಿ ಬ್ಲಾಸ್ಟ್ ಮಾಡುತ್ತೇನೆ ಎನ್ನುವ ಇ-ಮೇಲ್ ಕಳುಹಿಸಲಾಗಿತ್ತು.

ತಕ್ಷಣವೇ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿ ತುರ್ತು ರಜೆ ಘೋಷಿಸಲಾಗಿತ್ತು. ನಂತರ ಠಾಣೆಗೆ ಮಾಹಿತಿ ನೀಡಲಾಗಿತ್ತು. ಬಾಂಬ್ ನಿಷ್ಕ್ರಿಯ ದಳದ ಜತೆ ಪೊಲೀಸರು ಆಗಮಿಸಿದ್ದು, ಇದು ಹುಸಿ ಬಾಂಬ್ ಕರೆ ಎಂದು ತಿಳಿದಿದೆ.

ಬಾಲಕನನ್ನು ವಶಕ್ಕೆ ಪಡೆದ ನಂತರ ತಮಾಷೆಗಾಗಿ ಮಾಡಿದೆ ಎಂದು ಆತ ಹೇಳಿದ್ದಾನೆ. ಬಾಲಕನನ್ನು ಬಾಲ ನ್ಯಾಯಮಂಡಳಿ ವಶಕ್ಕೆ ಒಪ್ಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!