ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರ ಕಳೆದ ವಾರದ ಅಶ್ಲೀಲ ಚಿಹ್ನೆಯ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಇಂತಹ ಚರ್ಚೆಯ ನಡುವೆ ನಟ ಸುದೀಪ್ ವಾರದ ಕತೆಯಲ್ಲಿ ಚಕ್ರವರ್ತಿಯಿಂದಲೇ ಕ್ಷಮೆ ಕೇಳಿಸಿದ್ದಾರೆ.
ಈ ಬಗ್ಗೆ ಸುದೀಪ್ ಡಿಫರೆಂಟ್ ಆಗಿ ಟಾಪಿಕ್ ಶುರು ಮಾಡಿ, ಎಲ್ಲರಿಂದರೂ ಕೈ ನಲ್ಲಿರುವ ಎಲ್ಲಾ ಬೆರಳುಗಳ ಉಪಯೋಗಗಳ ಬಗ್ಗೆ ಸದಸ್ಯರ ಬಳಿ ಹೇಳಿಸಿ ಕೊನೆಯಲ್ಲಿ ಚಕ್ರವರ್ತಿಯವರ ಬಾಯಲ್ಲಿ ತಾವು ತೋರಿಸಿದ ಅಶ್ಲೀಲ ಚಿಹ್ನೆ ತಪ್ಪೆಂದು ಅರಿವು ಮಾಡಿಸಿದ್ದಾರೆ.
ಮೊದಲಿಗೆ ಮಧ್ಯದ ಬೆರಳು ಪಂಚ ಭೂತಗಳನ್ನು ಬ್ಯಾಲೆನ್ಸ್ ಮಾಡಲಿದೆ ಎಂದ ಚಕ್ರವರ್ತಿ ಕೊನೆಗೆ ನಾನು ಕೋಪದಲ್ಲಿ ಈ ರೀತಿ ಚಿಹ್ನೆ ಬಳಸಿದೆ. ತಪ್ಪಾಯಿತು ಎಂದಿದ್ದಾರೆ.
ಸುದೀಪ್ ಅವರು ಚಕ್ರವರ್ತಿಗೆ ಕಿವಿ ಮಾತನ್ನು ಹೇಳಿದ್ದು, ಯಾರ ಮನೆಯ ಹೆಣ್ಣುಮಕ್ಕಳಿಗೆ ಈ ರೀತಿ ಆದರೆ ಏನು ಮಾಡಬೇಕು? ಎಂತಹವರೇ ಆದರೂ ಕನಿಷ್ಠ ಆತನ ಕೆನ್ನೆಗೆ ಬಾರಿಸುವಷ್ಟು ಕೋಪ ಬರುತ್ತದೆ. ಹಾಗೆಯೇ ಪ್ರಿಯಾಂಕಾ ಕೂಡ ಬಿಗ್ ಬಾಸ್ ಮನೆಯ ಹೆಣ್ಣು ಮಗಳು. ಈ ರೀತಿ ನಡೆದುಕೊಂಡು ನಿಮ್ಮ ವ್ಯಕ್ತಿತ್ವ ಹಾಳು ಮಾಡಿಕೊಳ್ಳಬೇಡಿ ಎಂದಿದ್ದಾರೆ.