ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನನ್ನಮ್ಮ ಆಸ್ಪತ್ರೆಯಿಂದ ಜೀವಂತ ಹೊರಬರುತ್ತಾರೋ ಇಲ್ಲವೋ ಅಂತ ರಾತ್ರಿಯಿಡೀ ಎದ್ದು ಕುಳಿತಿರುತ್ತಿದ್ದೆ!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬಡವ,ಶ್ರೀಮಂತ,ನಟ,ಸಾಮಾನ್ಯ ಮನುಷ್ಯ ಎಂದು ಕೊರೋನಾ ಬೇಧಭಾವ ಮಾಡದೇ ಜನರನ್ನು ಹಿಂಸಿಸುತ್ತಿದೆ. ಕೊರೋನಾ ಕರಾಳ ಮುಖವನ್ನು ಖ್ಯಾತ ಹಾಸ್ಯ ನಟಿ,ನಿರೂಪಕಿ ಭಾರತಿ ಸಿಂಗ್ ಬಿಚ್ಚಿಟ್ಟಿದ್ದಾರೆ.
‘ತನ್ನ ತಾಯಿಗೆ ಕೊರೋನಾ ಪಾಸಿಟಿವ್ ಬಂದಾಗ ತಮ್ಮ ಮನಸ್ಥಿತಿ ಹೇಗಿತ್ತು ಅನ್ನೋದನ್ನು ಭಾರತಿ ಹೇಳಿದ್ದಾರೆ. ಅಮ್ಮನಿಗೆ ಕೊರೋನಾ ಸೋಂಕು ತಗುಲಿತ್ತು. ಆಂಬುಲೆನ್ಸ್‌ನಲ್ಲಿ ಕಳಸಿದ್ದೆವು. ಮಲಗಿದಾಗಲೂ ನನ್ನ ಕಿವಿಗೆ ಆಂಬುಲೆನ್ಸ್ ಸದ್ದೇ ಕೇಳುತ್ತಿತ್ತು. ಆಸ್ಪತ್ರೆ ಮುಂದೆ ನಿಂತರೆ ಎಷ್ಟು ಜನ ಒಳಗೆ ಹೋಗುತ್ತಿದ್ದರೋ ಅಷ್ಟೇ ಜನ ಮೃತಪಟ್ಟು ಹೊರಗೆ ಬರುತ್ತಿದ್ದರು.
ನನ್ನ ಅಮ್ಮ ಆರೋಗ್ಯವಾಗಿ ನಡೆದುಕೊಂಡು ಬರಲಿ ಅನ್ನೋದೆ ನನ್ನ ಪ್ರಾರ್ಥನೆಯಾಗಿತ್ತು. ಅಲ್ಲಿಂದ ಕರೆ ಮಾಡಿ, ನನ್ನ ಸುತ್ತ ಮುತ್ತ ಮಲಗಿದ್ದ ಪೇಶೆಂಟ್ಸ್ ಎಲ್ಲ ಸಾಯುತ್ತಿದ್ದಾರೆ ಎಂದು ಅಮ್ಮ ಅಳುತ್ತಾ ಕರೆಮಾಡುತ್ತಿದ್ದರು. ಮಾನಸಿಕವಾಗಿ ಧೈರ್ಯದಿಂದ ಇದ್ದರೆ ಮಾತ್ರ ರೋಗ ಗೆಲ್ಲಬಹುದು. ಡಾಕ್ಟರ್,ನರ್ಸ್‌ಗಳಿಗೆ ನನ್ನ ಕೋಟಿ ಧನ್ಯವಾದ’ ಎಂದಿದ್ದಾರೆ.

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss