ಮನ್‌ ಕಿ ಬಾತ್‌ ಮೂಲಕ ದೇಶದ ಯುವಜನತೆಗೆ ಮೋದಿ ಪ್ರಶ್ನೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನಿ ನರೇಂದ್ರ ಮೋದಿಯವರು ಇಂದು (ಭಾನುವಾರ) ಆಕಾಶವಾಣಿ ಕಾರ್ಯಕ್ರಮ ‘ಮನ್ ಕಿ ಬಾತ್’ ಮೂಲಕ ದೇಶದ ಜನರನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಜೂನ್ 25, 1975 ರಿಂದ ಸುಮಾರು 21 ತಿಂಗಳ ಕಾಲ ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದನ್ನು ನೆನಪಿಸಿಕೊಂಡರು. “ನಮ್ಮ ದೇಶದ ಯುವಕರಿಗೆ ನಾನು ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ನಿಮ್ಮ ಪ್ರೌಢಾವಸ್ಥೆಯಲ್ಲಿ ನಿಮ್ಮ ಪೋಷಕರು ತುರ್ತು ಪರಿಸ್ಥಿತಿಯನ್ನು ಅನುಭವಿಸಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ? ಎಂದರು.

ಆಗ ದೇಶದ ಪ್ರಜೆಗೆ ಇರಬೇಕಾದಂತಹ ಎಲ್ಲಾ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಯಿತು. ಬದುಕುವ ಹಕ್ಕು, ವ್ಯಕ್ತಿಯ ಸ್ವಾತಂತ್ರ್ಯವನ್ನು ಕಸಿದು, ದೇಶದ ಪ್ರಜಾಪ್ರಭುತ್ವವನ್ನು ನಾಶ ಮಾಡುವ ಪ್ರಯತ್ನಗಳು ನಡೆದಿದ್ದವು. ದೇಶದ ನ್ಯಾಯಾಲಯಗಳು, ಮಾಧ್ಯಮಗಳು ಎಲ್ಲಾ ಸಾಂವಿಧಾನಿಕ ವ್ಯವಸ್ಥೆಗಳನ್ನು ಹಿಡಿದಿಟ್ಟುಕೊಳ್ಳಲಾಯಿತು. ಅನುಮತಿಯಿಲ್ಲದ ಏನನ್ನೂ ಬಹಿರಂಗವಾಗಿ ಪ್ರಕಟ ಮಾಡುವಂತಿರಲಿಲ್ಲ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾನೂ ಕೂಡ ಹೋರಾಟ ಮಾಡಿದ್ದೇನೆ ಎಂಬುದನ್ನು ಪ್ರಧಾನಿ ನೆನಪು ಮಾಡಿಕೊಂಡರು.

ಈ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಜಯ ಸಾಧಿಸಿದ ಭಾರತೀಯ ಆಟಗಾರರನ್ನು ಮೋದಿ ಅಭಿನಂದಿಸಿದರು. ಮಿಥಾಲಿ ರಾಜ್ ಅವರು ಭಾರತೀಯ ಮಹಿಳಾ ಕ್ರಿಕೆಟ್‌ಗೆ ಸಲ್ಲಿಸಿದ ಸೇವೆಯನ್ನು ಮೋದಿ ಶ್ಲಾಘಿಸಿದರು. ಕೊರೊನಾ ಸೋಂಕಿನಿಂದ ಗುಣಮುಖರಾಗಲು ಮೂರನೇ ಡೋಸ್‌ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಬಾಹ್ಯಾಕಾಶ ಕ್ಷೇತ್ರದ ಸ್ಟಾರ್ಟ್-ಅಪ್‌ಗಳ ಬಗ್ಗೆ ಮೋದಿ ಮನ್ ಕಿ ಬಾತ್‌ನಲ್ಲಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!