Tuesday, August 16, 2022

Latest Posts

ಮುಂಬೈಗೆ ವೈಯಕ್ತಿಕ ಕೆಲಸದ ನಿಮಿತ್ತ ಹೋಗಿದ್ದೆ ಹೊರತು ನಾನು ಎಲ್ಲೂ ಹಾರಿ ಹೋಗಿಲ್ಲ: ಅನುಶ್ರೀ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:
ಡ್ರಗ್​ ಕೇಸ್​ಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ ಬೆನ್ನಲ್ಲೇ ಅನುಶ್ರೀ ಹೆಸರು ಎಲ್ಲೆಡೆ ಸದ್ದು ಮಾಡುತ್ತಿದ್ದು, ಇದರ ನಡುವೆ ಅವರು ಮುಂಬೈಗೆ ಹಾರಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಅನುಶ್ರೀ ಸ್ಪಷ್ಟನೆ ನೀಡಿದ್ದಾರೆ. ‘ಡ್ರಗ್ಸ್​ ಸೇವನೆ, ಖರೀದಿ ಪ್ರಕರಣದಲ್ಲಿ ನನ್ನ ವಿಚಾರಣೆ ನಡೆಸಿರಲಿಲ್ಲ. ಕಳೆದ ವರ್ಷ ವಿಚಾರಣೆಗೆ ಕರೆದಾಗ ಎಲ್ಲ ಹೇಳಿದ್ದೇನೆ. ಕಾನೂನು ರೀತಿ ಎಲ್ಲವನ್ನೂ ನಾನು ಹೇಳಿದ್ದೇನೆ. ನಾನು ಸೋಮವಾರ ಮುಂಬೈಗೆ ವೈಯಕ್ತಿಕ ಕೆಲಸದ ನಿಮಿತ್ತ ಹೋಗಿದ್ದೆ. ಅಂದೇ ನಾನು ರಿಟರ್ನ್​ ಟಿಕೆಟ್​ ಕೂಡ ಬುಕ್ ಮಾಡಿದ್ದೆ. ನಾನು ಎಲ್ಲೂ ಹಾರಿ ಹೋಗಿರಲಿಲ್ಲ’ ಎಂದಿದ್ದಾರೆ.
ಇನ್ನು ಅನುಶ್ರೀ ವಿರುದ್ಧ ಬಿಗ್​ ಬಾಸ್​ ಸ್ಪರ್ಧಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರ್ಗಿ ಸಾಕಷ್ಟು ರೀತಿಯಲ್ಲಿ ಹೇಳಿಕೆ ನೀಡಿದ್ದರು. ಈ ವಿಚಾರದಲ್ಲೂ ಸ್ಪಷ್ಟನೆ ನೀಡಿದ ಅನುಶ್ರೀ . ‘ಪ್ರಶಾಂತ್​ ಸಂಬರಗಿ ಅವರು ಕಾನೂನು ಮೂಲಕ ಹೋಗಲಿ. ನಮ್ಮ ಸಮಾಜದಲ್ಲಿ ಕಾನೂನು ಇದೆ. ಎಲ್ಲ ವಿಚಾರಗಳಿಗೆ ಆಗಲೂ ಉತ್ತರ ಕೊಟ್ಟಿದ್ದೇನೆ, ಈಗಲೂ ಉತ್ತರ ಕೊಡುತ್ತಿದ್ದೇನೆ’ ಎಂದರು.
ಆರೋಪಿಗಳು ಏನು ಬೇಕಾದರೂ ಆರೋಪ ಮಾಡಲಿ. ವಿಚಾರಣೆ ವೇಳೆ ಕೇಳಿದ ಪ್ರಶ್ನೆಗಳ ಬಗ್ಗೆ ಮಾಹಿತಿ ನೀಡೋಕೆ ಸಾಧ್ಯವಿಲ್ಲ. ನನಗೆ ಯಾವುದೇ ಪ್ರಭಾವಿಗಳ ಬೆಂಬಲವೂ ಇಲ್ಲ. ನಾನು ಕಳೆದ 3 ವರ್ಷದಿಂದ ಇದೇ ಮನೆಯಲ್ಲಿ ಇದ್ದೇನೆ. ಬಾಡಿಗೆ ಬಗ್ಗೆ ನಮ್ಮ ಮನೆ ಮಾಲೀಕರ ಬಳಿ ಕೇಳಬಹುದು. ಮಂಗಳೂರಿನ ಕದ್ರಿಯಲ್ಲಿ ಒಂದು ಮನೆ ಇದೆ, ಆದರೆ ಆ ಮನೆಯಲ್ಲಿ ಸಾಲವಿದೆ ಎಂದು ಅನುಶ್ರೀ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss