‘ನಾನು ನಾಳೆ 300 ರೂಪಾಯಿ ತರಲು ಮರೆಯುವುದಿಲ್ಲ’ ಎಂದು ವಿದ್ಯಾರ್ಥಿಗಳ ಕೈಯಲ್ಲಿ 30 ಬಾರಿ ಬರೆಸಿದ ಶಾಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾಲೆಯೊಂದರಲ್ಲಿ 300 ರೂಪಾಯಿ ತರಲು ಮರೆತ ಮಕ್ಕಳಿಗೆ 30 ಬಾರಿ ‘ನಾನು ನಾಳೆ 300 ರೂಪಾಯಿ ತರಲು ಮರೆಯುವುದಿಲ್ಲ’ ಎಂದು ಬರೆಸಿದ್ದಾರೆ.

ಮುಂಬೈನ ಥಾಣೆಯ ಗೋಧ್‌ಬಂದರ್ ರಸ್ತೆಯ ನ್ಯೂ ಹೊರೈಝಾನ್ ಸ್ಕಾಲರ್ಸ್ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದೆ. 300 ರೂಪಾಯಿಯನ್ನು ಶಾಲೆಗೆ ತಂದು ಕೊಡಲು ಏ.20ರವರೆಗೆ ಗಡುವು ನೀಡಲಾಗಿತ್ತು. ಹಣ ಎಲ್ಲಿ ಎಂದು ಶಿಕ್ಷಕರು ಕೇಳಿದಾಗ ಮರೆತು ಬಂದೆ ಎಂದು ಕೆಲ ಮಕ್ಕಳು ಹೇಳಿದ್ದಾರೆ.

ದುಡ್ಡು ತರಲು ಮರೆಯಬಾರದು ಎಂದು 30 ಬಾರಿ ಬರೆಸಿದ್ದು, ಮಕ್ಕಳ ಮನಸ್ಸಿಗೆ ನೋವಾಗಿದೆ. ಇದನ್ನು ಕ್ಷಮಿಸುವುದಿಲ್ಲ, ಮಕ್ಕಳು ಶಾಲೆಗೆ ಹೋಗಲು ಇಷ್ಟಪಡುತ್ತಿಲ್ಲ. ಪಾಠದ ವಿಷಯದಲ್ಲಿ ಶಿಕ್ಷೆ ನೀಡಬಹುದಿತ್ತು. ಬೇರೆ ಮಕ್ಕಳ ಎದುರು ಅವಮಾನ ಮಾಡಿದ್ದು ತಪ್ಪು, ಅವರ ಭಾವನಾತ್ಮಕತೆಗೆ ಬೆಲೆ ಇಲ್ಲವಾ ಎಂದು ಪೋಷಕರು ಪ್ರಶ್ನಿಸಿದ್ದಾರೆ.

ಈ ಸಾಲನ್ನು ಬರೆಯಲು ಇಷ್ಟಪಡದ ಮಕ್ಕಳನ್ನು ತರಗತಿಯ ಮೂಲೆಯಲ್ಲಿ ನಿಂತು ಬರೆಯುವಂತೆ ಶಿಕ್ಷಕರು ಸೂಚಿಸಿದ್ದಾರೆ. ಪೋಷಕರ ವಾಟ್ಸಾಪ್ ಗ್ರೂಪ್‌ನಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದು, ಪ್ರಾಂಶುಪಾಲರಿಗೆ ದೂರು ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!