Tuesday, June 28, 2022

Latest Posts

ಜ.5ಕ್ಕೆ ಜೆಡಿಎಸ್‌ಗೆ ರಾಜೀನಾಮೆ ನೀಡುತ್ತೇನೆ: ಪರಿಷತ್ ಸದಸ್ಯ ಸಂದೇಶ್ ನಾಗರಾಜ್

ಹೊಸ ದಿಗಂತ ವರದಿ, ಮೈಸೂರು:

ನನ್ನ ವಿಧಾನಪರಿಷತ್ ಸದಸ್ಯ ಸ್ಥಾನ ಬರುವ ಜನವರಿ 5ಕ್ಕೆ ಮುಗಿಯಲಿದೆ. ಅಂದೇ ಜೆಡಿಎಸ್‌ಗೆ ರಾಜೀನಾಮೆ ನೀಡುತ್ತೇವೆ ಎಂದು ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ತಿಳಿಸಿದರು.
ಶುಕ್ರವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ 5 ರಂದು ನನ್ನ ಎಂಎಲ್‌ಸಿ ಅವಧಿ ಮುಗಿಯಲಿದೆ. ಅಂದು ನಾನು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ. ಅಂದೇ ಪತ್ರಿಕಾಗೋಷ್ಠಿ ಕರೆದು ನಡೆದಿರುವ ಎಲ್ಲಾ ವಿಚಾರಗಳ ಕುರಿತು ಕೂಲಂಕುಷವಾಗಿ ಮಾತನಾಡುತ್ತೇನೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಮುಂದೆ ಹೇಳುತ್ತೇನೆ ಎಂದರು.
ಜೆಡಿಎಸ್ ಪಕ್ಷದ ಅಪ್ಪ ಹಾಗೂ ಮಗ ರೇವಣ್ಣ ಬಂದು ಚುನಾವಣೆಯ ಹಿಂದಿನ ದಿನ ಪಕ್ಷದ ಬಿ ಫಾರ್ಮ್ ಕೊಟ್ಟು ಹೋಗಿದ್ದರು. ಜೆ.ಡಿ.ಎಸ್ ಅವರೆ ಮನೆಬಾಗಿಲಿಗೆ ಬಂದಿದ್ದರು. ಅಪ್ಪ ಮಕ್ಕಳು ಗುದ್ದಾಡಿಕೊಡಿಕೊಂಡು ನನಗೆ ಅವಮಾನಮಾಡಿದರು. ಜೆಡಿಎಸ್ ನಿಂದ ನಿಂತರು ಸೋಲ್ತೀನಿ ಅಂತ ಗೊತ್ತಿತ್ತು. ಹಿಂದಿನ ದಿನ ರಾತ್ರಿ ಬಿ.ಫಾರ್ಮ್ ಕೊಟ್ಟು ಹೋಗಿದ್ದರು. ಆದರೆ ಮೈಸೂರು ಮಹಾರಾಜರ ಮಾತನ್ನ ಕೇಳಿಕೊಂಡು ಕೊಡಲಿಲ್ಲ ಶಾಸಕ ಸಾ.ರಾ.ಮಹೇಶ್ ಹೆಸರೇಳದೆ ` ಮಹಾರಾಜ ` ಎಂದು ವ್ಯಂಗ್ಯವಾಡಿದರು. ನೀನು ಹೊಡೆದಂಗೆ ಮಾಡು ನಾನು ಅತ್ತಂಗೆ ಮಾಡುತ್ತೇನೆ ಅಂತ ಮಾಡಿದರು. ಮೈಸೂರು ಮಹಾರಾಜ ಅಂದ್ರೆ ಚಾಮರಾಜ ಒಡೆಯರ್ ಅಲ್ಲ. ನಮ್ಮಂತವರಲ್ಲೆ ಒಬ್ಬರು ಮಹಾರಾಜರಿದ್ದಾರೆ. ಜೆಡಿಎಸ್ ವರಿಷ್ಠ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಮಂತ್ರಿ, ಸೇನಾಧಿಪತಿ ಎಲ್ಲಾ ಅವರೆ. ಕಡೆಗೊಂದು ದಿನ ಅವರೊಬ್ಬರೆ ಪಕ್ಷದಲ್ಲೆ ಉಳಿದುಕೊಳ್ಳುವುದು. ಎಲ್ಲರೂ ಪಕ್ಷದಿಂದ ಹೋಗಿರೋದು ಆ ಮಹಾರಾಜರಿಂದಲೇ ಎಂದು ಕಿಡಿಕಾರಿದರು.
ಚುನಾವಣೆಯ ಹಿಂದಿನ ದಿನ ಬಿ.ಫಾರ್ಮ್ ಯಾರು ಕೊಟ್ಟಿದ್ದು, ಎಲ್ಲಿ ಕೊಟ್ಟಿದ್ದು.. ಎಲ್ಲಾವನ್ನು ತೋರಿಸುತ್ತೇನೆ. ಯಾರು ಯಾರಿಂದಲೂ ಯಾರನ್ನು ಮುಗಿಸಲು ಸಾಧ್ಯವಿಲ್ಲ. ಜವರಿ 5 ನೇ ತಾರೀಖು ಸುದ್ದಿಗೋಷ್ಠಿ ನಡೆಸಿ, ಎಲ್ಲವನ್ನು ಹೇಳುತ್ತೇನೆ. ನಂತರ ಯಾರನ್ನ ಯಾರು ಮುಗಿಸುತ್ತಾರೆ ಗೊತ್ತಾಗುತ್ತೆ. ಇಷ್ಟು ದಿನ ಮೈಲ್ಡ್ ರಾಜಕಾರಣ ಮಾಡುತ್ತಿದ್ದೆ. ಜ.5 ರ ನಂತರದ ರಫ್ ರಾಜಕಾರಣ ಮಾಡುತ್ತೇನೆ ಎಂದು ಗುಡುಗಿದರು.
ನನ್ನನ್ನು ಮುಗಿಸಲು ಸಾಧ್ಯವಿಲ್ಲ:
ಸಂದೇಶ್ ನಾಗರಾಜ್ ಕುಟುಂಬವನ್ನು ರಾಜಕೀಯವಾಗಿ ಯಾರಿಂದಲೂ ಯಾರನ್ನೂ ಮುಗಿಸಲು ಸಾಧ್ಯವಿಲ್ಲ. ನಾವು ಮುಗೀತೀವಾ ಅವರು ಮುಗೀತಾರಾ ಅನ್ನೋದು ಜನವರಿ 5ರ ನಂತರ ಗೊತ್ತಾಗಲಿದೆ. ನಾನು ಸಕ್ರಿಯ ರಾಜಕಾರಣದಲ್ಲೇ ಇರುತ್ತೇನೆ ಎಂದು ತಿಳಿಸಿದರು.
ಕಾಂಗ್ರೆಸ್, ಬಿಜೆಪಿಗೆ ಮತ ಹಾಕಿದ್ದೇನೆ:
ಕಳೆದ ಬಾರಿ ಚುನಾವಣೆಯಲ್ಲಿ ನನಗೆ ನಾನೇ ಮತ ಹಾಕಿಕೊಂಡಿದ್ದೆ. ಈ ಬಾರಿ ಬೇರೆಯವರಿಗೆ ಹಾಕಿದ್ದೇನೆ. ಸಂತೋಷದಿoದ ಮತ ಹಾಕಿದ್ದೇನೆ. 6 ಜನರು ಗೆಲ್ಲಲಿ ಎಂದು ಶುಭಾಶಯ ಹೇಳುತ್ತೇನೆ. 6 ಜನರಲ್ಲಿ ಇಬ್ಬರು ಗೆಲ್ಲುತ್ತಾರೆ. ಕಾಂಗ್ರೆಸ್, ಬಿಜೆಪಿಗೆ ಬೆಂಬಲ ನೀಡಿದ್ದೇನೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss