ದಿಗಂತ ವರದಿ ಹುಬ್ಬಳ್ಳಿ:
ಮುಖ್ಯಮಂತ್ರಿಯಾಗಿ ನಾನು ಮುಂದುವರಿಯುವುದು ಮೊದಲಿನಿಂದಲೂ ಕೇಂದ್ರದ ವರಿಷ್ಠರ ಇಚ್ಛೆಯಾಗಿತ್ತು. ಈಗ ಕಾರ್ಯಕಾರಿಣಿಯಲ್ಲಿ ರಾಜ್ಯ ಉಸ್ತುವಾರಿ ಅರಣ ಸಿಂಗ್ ಅವರು ಪುನರ್ ಉಚ್ಛರಿಸಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವರಿಷ್ಠರಿಗೆ ನನ್ನ ಮೇಲೆ ವಿಶ್ವಾಸವಿದ್ದ ಕಾರಣ ಮುಂದುವರಿಯಲು ತಿಳಿಸಿದ್ದಾರೆ ಅವರಿಗೆ ಧನ್ಯವಾದ ತಿಳಿಸುತ್ತೇನೆ. ನನ್ನ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಪಕ್ಷ ಬಲಿಷ್ಠವಾಗಬೇಕು ಪಕ್ಷ ಮತ್ತು ಸರ್ಕಾರದ ನಡುವೆ ಸಂಯೋಜನೆಯಾಗಬೇಕು. ಒಗ್ಗಟ್ಟಿನಿಂದ ಎಲ್ಲರೂ ಪಕ್ಷ ಸಂಘಟನೆ,ಬೆಳವಣಿಗೆ ಮತ್ತು ಬರುವಂತಹ ಚುನಾವಣೆ ಪರಿಶ್ರಮದಿಂದ ಎದುರಿಸುತ್ತೇವೆ ಎಂದರು.
ಸದ್ಯದಲ್ಲಿ ಯಾವುದೇ ದೆಹಲಿ ಪ್ರವಾಸವಿಲ್ಲ.ಹಲವಾರು ಕಾರ್ಯಕ್ರಮಗಳು ಮತ್ತು ಸಭೆಗಳನ್ನು ನಡೆಸುತ್ತೇನೆ ಎಂದು ತಿಳಿಸಿದರು.