ಹೊಸ ದಿಗಂತ ಆನ್ಲೈನ್ ಡೆಸ್ಕ್:
I WON THE ELECTION!
ಹಾಗಂತ ಕೊನೆಗೂ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮೇಲಿನ ವಾಕ್ಯಕ್ಕೆ ಅಮೇರಿಕ ಅಧ್ಯಕ್ಷೀಯ ಚುನಾವಣೆ ಕಠಿಣವಾಗಿತ್ತು. ಹಾಗಾಗಿ ಜೋ ಬಿಡೆನ್ ಗೆದ್ದರು, ಆದರೆ ಅವರು ವಂಚಿಸಿದ್ದಾರೆ ಎಂದು ಸೇರಿಸಿದ್ದಾರೆ.
https://twitter.com/realDonaldTrump/status/1328200072987893762
ನ.೩ರಂದು ಹೊರಬಿದ್ದ ಚುನಾವಣೆಯ ಫಲಿತಾಂಶದಲ್ಲಿ ತಾನು ಸೋತು ಬಿಡೆನ್ ಗೆಲುವು ಸಾಧಿಸಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿರಲಿಲ್ಲ. ಎಲ್ಲಾ ಫಲಿತಾಂಶಗಳು ಇನ್ನೂ ಹೊರಬಿದ್ದಿಲ್ಲ. ಅಧಿಕೃತ ಮಾಧ್ಯಮ ಘೋಷನೆಯೂ ಆಗಿಲ್ಲ ಎಂಬುದು ಅವರು ವಾದಿಸಿದ್ದರು.
ಶುಕ್ರವಾರ ಮಾಧ್ಯಮ ಮಾಡಿದ ವರದಿಯ ಪ್ರಕಾರ, ಬಿಡೆನ್ಗೆ 306 ಹಾಗೂ ಟ್ರಂಪ್ಗೆ 232 ಮತಗಳು ಲಭಿಸಿದೆ. ಗೆಲುವು ಸಾಧಿಸಲು 270 ಚುನಾವಣಾ ಮತಗಳ ಅಗತ್ಯವಿದೆ. ಬಿಡೆನ್ ಈಗಾಗಲೇ 270 ಮತಗಳನ್ನು ದಾಟಿ 306 ಮತಗಳನ್ನು ಪಡೆದಿದ್ದಾರೆ. ಆದರೆ ಇದನ್ನು ಒಪ್ಪಿಕೊಂಡಿರದ ಟ್ರಂಪ್, ಸರಿಯಾಗಿ ಮತ ಎಣಿಕೆ ನಡೆದರೆ ನಾನೇ ಮತ್ತೆ ಅಧ್ಯಕ್ಷನಾಗುತ್ತೇನೆ ಎಂದು ಹೇಳಿದ್ದರು.